ಜೈಪುರ: ಇಲ್ಲಿ ನಾಳೆ ಆಯೋಜಿಸಲಾಗಿರುವ ದಲಿತ ಸಮ್ಮೇಳನವನ್ನುದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡಲಿದ್ದು, ತದ ನಂತರ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಾಲಕಿಯ ಪೋಷಕರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಬೈಕ್ನರ್ ನಲ್ಲಿರುವ ಶೈಕ್ಷಣಿಕ ಸಂಸ್ಥೆಯಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ ಆಕೆಯನ್ನು ಹತ್ಯೆ ಮಾಡಿ ನೀರಿನ ಟ್ಯಾಂಕ್ ನಲ್ಲಿ ಹಾಕಿದ್ದನು.
ರಾಹುಲ್ ಗಾಂಧಿ ನಾಳೆ ಮೃತಪಟ್ಟ ದಲಿತ ಬಾಲಕಿ ನಿವಾಸಕ್ಕೆ ತೆರಳಿ, ಪೋಷಕರಿಗೆ ಸಾಂತ್ವಾನ ಹೇಳಲಿದ್ದು, ತದ ನಂತರ ದಲಿತ ಸಮ್ಮೇಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.