ಮುಸ್ಲಿಂರಿಗೆ ಬೆದರಿಕೆ: ಬಾಬಾ ರಾಮ್‌ದೇವ್ ವಿರುದ್ಧ ಹೈದರಾಬಾದ್ ವಿದ್ಯಾರ್ಥಿಯಿಂದ ದೂರು

ಮುಸ್ಲಿಂರು ಭಾರತ್ ಮಾತಾ ಕೀ ಜೈ ಎಂದು ಹೇಳಲು ಒಪ್ಪದಿದ್ದರೆ ಅವರ ತಲೆ ಕತ್ತರಿಸಿ ಹಾಕುತ್ತಿದ್ದೆ ಎಂದು ಹೇಳಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ...
ಬಾಬಾ ರಾಮ್‌ದೇವ್
ಬಾಬಾ ರಾಮ್‌ದೇವ್

ಹೈದರಾಬಾದ್: ಮುಸ್ಲಿಂರು ಭಾರತ್ ಮಾತಾ ಕೀ ಜೈ ಎಂದು ಹೇಳಲು ಒಪ್ಪದಿದ್ದರೆ ಅವರ ತಲೆ ಕತ್ತರಿಸಿ ಹಾಕುತ್ತಿದ್ದೆ ಎಂದು ಹೇಳಿದ್ದ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಹೈದರಾಬಾದ್ ವಿದ್ಯಾರ್ಥಿಯೊಬ್ಬ ದೂರು ದಾಖಲಿಸಿದ್ದಾನೆ.

27 ವರ್ಷದ ವೈದ್ಯಕೀಯ ವಿದ್ಯಾರ್ಥಿ ಮೊಹಮ್ಮದ್ ಬಿನ್ ಒಮರ್ ಬಾಬಾ ರಾಮ್‌ದೇವ್ ವಿರುದ್ಧ ಹೈದರಾಬಾದ್ ನ ದಬೇರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಬಾಬಾ ರಾಮ್‌ದೇವ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಯೂಟ್ಯೂಬ್ ನಲ್ಲಿ ಬಾಬಾ ರಾಮ್‌ದೇವ್ ಅವರು ಮಾತನಾಡಿರುವ ವಿಡಿಯೋ ನೋಡಿ ಮನಸ್ಸಿಗೆ ನೋವುಂಟಾಗಿದೆ ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನನ್ವಯ ರಾಮ್‌ದೇವ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) (ಧಾರ್ಮಿಕ ನಂಬಿಕೆಗಳಿಗೆ ಅಪಮಾನ) ಪ್ರಕಾರ ದೂರು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com