ನವದೆಹಲಿ: ಇನ್ನು ಮುಂದೆ 6 ತಿಂಗಳಿಗೊಮ್ಮೆ ಸರಕು ಸಾಗಣೆ ಹೆಲಿಕಾಪ್ಟರ್ ಮತ್ತು ವಿಮಾನ ಚಾಲನೆಯ ಪರವಾನಗಿ ಹೊಂದಿದ ಪೈಲಟ್ ಗಳು ಸಾರ್ಮರ್ಥ್ಯ ಪರೀಕ್ಷೆ ಎದುರಿಸಬೇಕಾಗುತ್ತದೆ.
ಈ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ನಿಯಮವು ಸರಕು ಸಾಗಣೆ ಹೆಲಿಕಾಫ್ಟರ್ ಮತ್ತು ವಿಮಾನದ ಸಹ ಪೈಲಟ್ ಗೂ ಅನ್ವಯಿಸುತ್ತದೆ ಎಂದು ಹೇಳಿದೆ. 1937ರ ವಿಮಾನಯಾನ ನಿಯಮಕ್ಕೆ ನಾಗರಿಕ ವಿಮಾನಯಾನ ಇಲಾಕೆಯು ತಿದ್ದುಪಡಿ ತಂದಿದೆ.
ಈ ತಿದ್ದುಪಡಿ ನಿಯಮದ ಪ್ರಕಾರ ಪೈಲಟ್ ಮತ್ತು ಸಹ ಪೈಲಟ್ ಆರು ತಿಂಗಳಿಗೊಮ್ಮೆ ಸಾಮರ್ಥ್ಯ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ.