ದೊಲ್ಕುನ್ ಇಸಾ ಉಗ್ರ ಮಸೂದ್ ಅಜರ್ ನಂತಲ್ಲ: ಕಾಂಗ್ರೆಸ್

ಟಿಬೆಟ್ ನ ನಾಯಕರು ದಲೈ ಲಾಮ ಅವರನ್ನು ಭೇಟಿ ಮಾಡುವುದಕ್ಕೂ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್
Updated on: 

ನವದೆಹಲಿ: ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾರತ ಸರ್ಕಾರ ವೀಸಾ ನೀಡಿದೆ ಎಂಬ ವರದಿಗಳು ಪ್ರಕಟವಾಗಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ನೀಡಿದ್ದು ಟಿಬೆಟ್ ನ ನಾಯಕರು ದಲೈ ಲಾಮ ಅವರನ್ನು ಭೇಟಿ ಮಾಡುವುದಕ್ಕೂ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದೆ.
ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಅಜರ್ ಮಸೂದ್ ಉಗ್ರನೆಂಬುದು ಸ್ಪಷ್ಟವಾಗಿದೆ. ಚೀನಾ ಭಾರತ ವಿರೋಧಿ ಕಾರ್ಯತಂತ್ರಗಳಿಗೆ ಮಾತ್ರ ಪಾಕಿಸ್ತಾನಕ್ಕೆ ನೆರವು ನೀಡುತ್ತಿದೆ. ಅಜರ್ ಮಸೂದ್ ಭಾರತ ವಿರೋಧಿ ಕಾರ್ಯತಂತ್ರಗಳ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಮಸೂದ್ ಹೇಳಿದ್ದಾನೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.   
"ಟಿಬೆಟ್ ನ ನಾಯಕರು ದಲೈ ಲಾಮ ಅವರನ್ನು ಭೇಟಿ ಮಾಡುವುದಕ್ಕೂ ಪಾಕಿಸ್ತಾನ ಪ್ರಾಯೋಜಿತ ಉಗ್ರವಾದಕ್ಕೂ ಬಹಳ ವ್ಯತ್ಯಾಸವಿದೆ, ಉಯ್ಘರ್ ಸಮುದಾಯದ ಸಂಘಟಾನಾಕಾರ ದೊಲ್ಕುನ್ ಇಸಾ ಅವರಿಗೆ  ಧರ್ಮಶಾಲಾದಲ್ಲಿ ನಡೆಯಲಿರುವ ವಿಶ್ವ ಉಯ್ಫರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಿಲು ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಉಯ್ಘರ್ ಸಮುದಾಯದ ನಾಯಕರು ಹಾಗೂ ಚೀನಾದ ಇತರ ಭಿನ್ನಮತೀಯ ನಾಯಕರು ಭಾಗವಹಿಸುವ ನಿರೀಕ್ಷೆ ಇದ್ದು ಪ್ರಜಾಪ್ರಭುತ್ವಕ್ಕೆ ಚೀನಾದ ರೂಪಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ತಿಳಿಸಿದ್ದಾರೆ. ಇನ್ನು ಧರ್ಮಶಾಲಾದಲ್ಲಿ ಸಮ್ಮೇಳನವನ್ನು ಆಯೋಜಿಸಿರುವ ತೇನ್ಸಿಂಗ್ ನಿಂಜೆಯ್, ಚೀನಾ ದೊಲ್ಕುನ್ ಇಸಾ ಅವರನ್ನು ಉಗ್ರನೆಂದು ಕರೆದಿರುವುದನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com