ದೇಶ

ಚೀನಾ ಪ್ರತಿರೋಧ ಪರಿಣಾಮ ಉಯ್ಘರ್ ಉಗ್ರ ದೋಲ್ಕುನ್ ವೀಸಾ ಹಿಂಪಡೆದ ಭಾರತ

ಚೀನಾ ಪ್ರತಿರೋಧ ಪರಿಣಾಮ ಉಯ್ಘರ್ ಉಗ್ರ ದೋಲ್ಕುನ್ ವೀಸಾ ಹಿಂಪಡೆದ ಭಾರತ
ದೋಲ್ಕುನ್ ಇಸಾ
Published On :

ನವದೆಹಲಿ: ಚೀನಾ ಪ್ರಬಲ ಪ್ರತಿರೋಧವೊಡ್ಡಿದ ಪರಿಣಾಮ ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ಹಿಂಪಡೆದಿದೆ.

ಧರ್ಮಶಾಲಾದಲ್ಲಿ ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ದೋಲ್ಕುನ್ ಭಾರತಕ್ಕೆ ಆಗಮಿಸಬೇಕಿತ್ತು. ಇದಕ್ಕಾಗಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ದೋಲ್ಕುನ್ ಗೆ ವೀಸಾ ಸಹ ನೀಡಿತ್ತು.

ಆದರೆ ದೋಲ್ಕುನ್ ಇಸಾ ನನ್ನು ಉಗ್ರನೆಂದು ಘೋಷಿಸಿರುವ ಚೀನಾ ಭಾರತ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇಸಾ ಚೀನಾಗೆ ಬೇಕಾಗಿರುವ ಪ್ರಮುಖ ಉಗ್ರನಾಗಿದ್ದಾನೆ. ಭಾರತ ಸರ್ಕಾರ ವೀಸಾ ನೀಡಿರುವುದರ ಬಗ್ಗೆ ಪ್ರಶ್ನಿಸಲಾಗಿದ್ದು, ಇಸಾಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂಬ ಉತ್ತರ ಭಾರತದಿಂದ ಬಂದಿದೆ ಎಂದು ಈ ಹಿಂದೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದರು.  ಈಗ ಚೀನಾದ ಪ್ರಬಲ ಪ್ರತಿರೋಧದ ನಂತರ ಇಸಾಗೆ ನೀಡಲಾಗಿದ್ದ ವೀಸಾವನ್ನು ವಾಪಸ್ ಪಡೆದಿರುವುದನ್ನು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.