ಕೋಟ್ಟಯಂ: ಇದೇ ಮೊದಲ ಬಾರಿಗೆ 1000 ವರ್ಷಗಳ ಹಳೆಯ ಸಂಪ್ರದಾಯವನ್ನು ಮುರಿದು ತಳದಂಞಾಡಿ ಜುಮಾ ಮಸೀದಿ, ಮಹಿಳೆಯರಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ..ಪ್ರಸ್ತುತ ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂದು ಹೋರಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಸೀದಿಯ ಸಮಿತಿ ಈ ಮಹತ್ತರ ತೀರ್ಮಾನ ಕೈಗೊಂಡಿದೆ..1000 ವರ್ಷಗಳಿಂದ ಮಸೀದಿಯ ಒಳಗೆ ಮಹಿಳೆಯರ ಪ್ರವೇಶ ನಿಷಿದ್ಧವಾಗಿತ್ತು..ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿರುವ ತಳದಂಞಾಡಿ ಜುಮಾ ಮಸೀದಿ ಭಾರತದಲ್ಲಿರುವ ಅತೀ ಪುರಾತನವಾದ ಮಸೀದಿಗಳಲ್ಲೊಂದಾಗಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics