ಐಆರ್​ಎನ್​ಎಸ್​ಎಸ್ 1ಜಿ ಉಡಾವಣೆ, ಜನರಿಗೆ ವಿಜ್ಞಾನಿಗಳು ನೀಡಿದ ಉಡುಗೊರೆ: ಮೋದಿ

ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ.

ಇಸ್ರೋ ಉಡಾಯಿಸಿದ ಐಆರ್ ಎನ್ ಎಸ್ಎಸ್ 1ಜಿ ಉಪಗ್ರಹ ಉಡಾವಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೀಕ್ಷಿಸಿದ್ದು, ವಿಜ್ಞಾನಿಗಳ ಸಾಧನೆಯನ್ನು ಹೊಗಳಿದ್ದಾರೆ. ಅಲ್ಲದೆ, ಉಪಗ್ರಹ ಉಡಾವಣೆಯೊಂದು ವಿಜ್ಞಾನಿಗಳು ಜನರಿಗೆ ನೀಡಿರುವ ಉಡುಗೊರೆಯಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರವು ಸ್ಥಳೀಯ ತಂತ್ರಜ್ಞಾನದ ಮೂಲಕ ತನ್ನದೇ ದಾರಿಯನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಜನರಿಗೆ ವಿಜ್ಞಾನಿಗಳು ನೀಡಿರುವ ದೊಡ್ಡ ಉಡುಗೊರೆ ಇದಾಗಿದೆ. ಇಂತಹ ಉಡುಗೊರೆ ನೀಡಿದ ವಿಜ್ಞಾನಿಗಳಿಗೆ ದೊಡ್ಡ ಧನ್ಯವಾದವನ್ನು ಹೇಳುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com