ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಅಡುಗೆ, ಪೂಜೆ ಮಾಡಬೇಡಿ: ಬಿಹಾರ ಸರ್ಕಾರದ ಆದೇಶ

ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಅಡುಗೆ, ಪೂಜೆ ಹಾಗೂ ಹೋಮ ಹವನಗಳನ್ನು ಮಾಡದಂತೆ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಅಡುಗೆ, ಪೂಜೆ ಹಾಗೂ ಹೋಮ ಹವನಗಳನ್ನು ಮಾಡದಂತೆ ಬಿಹಾರ ಸರ್ಕಾರ ಆದೇಶ ಹೊರಡಿಸಿದೆ.

ಬಿಸಿಗಾಳಿಯಿಂದಾಗಿ ಸಂಭವಿಸುತ್ತಿರುವ ಬೆಂಕಿ ಅವಘಡಗಳನ್ನು ತಡೆಯಲು ಸರ್ಕಾರ  ಈ ಆದೇಶ ಹೊರಡಿಸಿದೆ. ಬಿಹಾರದಲ್ಲಿ ಸುಮಾರು 2500 ಗುಡಿಸಲುಗಳಿಗೆ ಬೆಂಕಿ ಬಿದ್ದು 36 ಜನರು ಮೃತಪಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ  ಈ ಸಲಹೆ ನೀಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಾಸಿಸುವವರಿಗೆ ಹಗಲಿನ ವೇಳೆ ಆಹಾರ ತಯಾರಿಸದಂತೆ, ಪೂಜೆ-ಹವನ ಮಾಡದಂತೆ ಮತ್ತು ಹೊಲದಲ್ಲಿ ಬೆಳೆಯ ಉಳಿಕೆಗಳಿಗೆ ಬೆಂಕಿ ಹಚ್ಚದಂತೆ ಬಿಹಾರ ಸರ್ಕಾರ ಸಲಹೆ ನೀಡಿದೆ. ಬಿಸಿಗಾಳಿ ಹೆಚ್ಚಾಗಿರುವುದರಿಂದ ಬೆಂಕಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು  ನೈಸರ್ಗಿಕ ವಿಕೋಪ ನಿರ್ವಹಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com