ಕಾಶ್ಮೀರಕ್ಕೆ ತೆರಳುತ್ತಿದ್ದ ಜೆಯುಡಿ ಉಗ್ರ ಸಂಘಟನೆಯ ವಾಹನಗಳನ್ನು ತಡೆದ ಪಾಕಿಸ್ತಾನ!

ಕಾಶ್ಮೀರದಲ್ಲಿ ವಿತರಣೆ ಮಾಡಲು ಜೆಯುಡಿ ಉಗ್ರ ಸಂಘಟನೆ ಕಳಿಸುತ್ತಿದ್ದ ಪರಿಹಾರ ಸಾಮಗ್ರಿಗಳ ವಾಹನಗಳನ್ನು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ತಡೆ ಹಿಡಿದಿದೆ.
ಕಾಶ್ಮೀರಕ್ಕೆ ತೆರಳುತ್ತಿದ್ದ ಜೆಯುಡಿ ಉಗ್ರ ಸಂಘಟನೆಯ ವಾಹನಗಳನ್ನು ತಡೆದ ಪಾಕಿಸ್ತಾನ!
Updated on: 

ಲಾಹೋರ್: ಕಾಶ್ಮೀರದಲ್ಲಿ ವಿತರಣೆ ಮಾಡಲು ಜೆಯುಡಿ ಉಗ್ರ ಸಂಘಟನೆ ಕಳಿಸುತ್ತಿದ್ದ ಪರಿಹಾರ ಸಾಮಗ್ರಿಗಳ ವಾಹನಗಳನ್ನು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ತಡೆ ಹಿಡಿದಿದೆ.

ಪಾಕಿಸ್ತಾನದ ಅಧಿಕಾರಿಗಳು ಜೆಯುಡಿ ವಾಹನಗಳನ್ನು ತಡೆಹಿಡಿದಿದ್ದರಿಂದ ಪ್ರತಿಭಟನೆ ನಡೆದಿದೆ. ಉಗ್ರನ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಮಾತ್-ಉದ್- ದವಾ ಉಗ್ರ ಸಂಘಟನೆ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಿಂದ ಕಾಶ್ಮೀರಕ್ಕೆ ಪರಿಹಾರ ಸಾಮಗ್ರಿಗಳನ್ನು ಟ್ರಕ್ ಮೂಲಕ ಕಲಿಸಿಕೊಡುತ್ತಿತ್ತು. ಆದರೆ ಟ್ರಕ್ ಹಾಗೂ ಆಂಬುಲೆನ್ಸ್ ಗಳನ್ನು ಪಾಕಿಸ್ತಾನದ ಅಧಿಕಾರಿಗಳು ಗಡಿ ನಿಯಂತ್ರಣ ರೇಖೆ ಬಳಿಯೇ ತಡೆ ಹಿಡಿದಿದ್ದಾರೆ.

ಜೆಯುಡಿ ಕಾಶ್ಮೀರಕ್ಕೆ ಕಳಿಸಿಕೊಡುತ್ತಿದ್ದ ಸಾಮಗ್ರಿಗಳ ಪೈಕಿ ಅಕ್ಕಿ, ಎಣ್ಣೆ, ತರಕಾರಿಗಳಿದ್ದು, ಔಷಧಗಳೂ ಸೇರಿದ್ದವು, ಇಷ್ಟೇ ಅಲ್ಲದೆ ಡಾಕ್ಟರ್ ಗಳನ್ನೊಳಗೊಂಡ ಆಂಬುಲೆನ್ಸ್ ಗಳನ್ನೂ ಸಹ ಕಲಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಜಮಾತ್-ಉದ್-ದವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸಯೀದ್ 2008 ರ ಮುಂಬೈ ದಾಳಿಯ ರೂವಾರಿಯಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com