ಪಶ್ಚಿಮ ಬಂಗಾಳಕ್ಕೆ ಬಂಗಾಳ ಎಂದು ಮರು ನಾಮಕರಣ?

ಪಶ್ಚಿಮ ಬಂಗಾಳವನ್ನು ಬಂಗಾಳ ಎಂದು ಮರುನಾಮಕರಣ ಮಾಡುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಆಗಸ್ಟ್.2 ರಂದು ಪ್ರಸ್ತಾವನೆ ನೀಡಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ
Updated on: 

ಕೋಲ್ಕತಾ: ಪಶ್ಚಿಮ ಬಂಗಾಳವನ್ನು ಬಂಗಾಳ ಎಂದು ಮರುನಾಮಕರಣ ಮಾಡುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ  ಆಗಸ್ಟ್.2 ರಂದು ಪ್ರಸ್ತಾವನೆ ನೀಡಿದೆ.

ಪಶ್ಚಿಮ ಬಂಗಾಳದ ಹೆಸರಿನಲ್ಲಿ ಪಶ್ಚಿಮ ಎಂಬ ಪದವನ್ನು ತೆಗೆದು ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪಶ್ಚಿಮ ಬಂಗಾಳ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ. " ರಾಜ್ಯದ ಜನತೆ, ಪರಂಪರೆ, ಸಂಸ್ಕೃತಿಗಾಗಿ ಹಾಗೂ ರಾಜ್ಯದ ಹಿತಾಸಕ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಿಕೊಳ್ಳಲು ಪಶ್ಚಿಮ ಬಂಗಾಳವನ್ನು ಬಂಗಾಳ ಎಂದು ಮರುನಾಮಕರಣ ಮಾಡಬೇಕೆಂದಿದ್ದೇವೆ ಎಂದು ಪಾರ್ಥ ಚಟರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳವನ್ನು ಪಶ್ಚಿಮ ಬಂಗಾ, ಪಶ್ಚಿಮ ಬಾಂಗ್ಲಾ ಎಂದೂ ಕರೆಯಲಾಗುತ್ತಿದ್ದು, ರಾಜ್ಯಕ್ಕೆ ಮರುನಾಮಕರಣ ಮಾಡುವ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಚಟರ್ಜಿ ಮಾಹಿತಿ ನೀಡಿದ್ದಾರೆ.

ಆಗಸ್ಟ್. 26 ರಿಂದ ನಡೆಯಲಿರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. 2011 ರಲ್ಲೂ ಪಶ್ಚಿಮ ಬಂಗಾಳಕ್ಕೆ ಪಶ್ಚಿಮ ಬಂಗಾ ಎಂಬ ಹೆಸರನ್ನು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com