''ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಸೌದಿ ಅರೇಬಿಯಾ ದೊರೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಈಗ ಅಲ್ಲಿದ್ದಾರೆ. ನಿನ್ನೆ ಅವರು ಅಲ್ಲಿನ ಕಾರ್ಮಿಕ ಸಚಿವರನ್ನು ಭೇಟಿ ಮಾಡಿದ್ದರು. ಭಾರತೀಯ ನೌಕರರಿಗೆ ಸ್ವದೇಶಕ್ಕೆ ಬರಲು ನಿರ್ಗಮನ ವೀಸಾ ನೀಡಲು ಅಧಿಕಾರಿಗಳು ಸೂಚಿಸಿದ್ದು, ಅವರ ವಿಮಾನದಲ್ಲಿ, ಅವರ ಖರ್ಚಿನಲ್ಲಿಯೇ ಭಾರತಕ್ಕೆ ಕಳುಹಿಸಿಕೊಡಲಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.