ಕಳೆದ ಮಂಗಳವಾರ ತಡರಾತ್ರಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾಡ್ ಬಳಿ ಭಾರಿ ಮಳೆ ಮಳೆಯಿಂದಾಗಿ ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿದುಬಿದ್ದಿತ್ತು. ಈ ವೇಳೆ ಮಹರಾಷ್ಟ್ರ ಸಾರಿಗೆ ಸಂಸ್ಥೆಯ ಎರಡು ಬಸ್, ಒಂದು ತವೆರಾ, ಒಂದು ಹೋಂಡಾ ಸಿಟಿ ಕಾರು ಹಾಗೂ ಆಟೋವೊಂದು ಸಾವಿತ್ರಿ ನದಿಯಲ್ಲಿ ಕೊಚ್ಚಿ ಹೋಗಿದ್ದವು. ಈ ವಾಹನಗಳಲ್ಲಿ ಎಷ್ಟು ಜನರಿದ್ದರು ಎಂಬುದು ಇದುವರೆಗೂ ಖಚಿತ ಮಾಹಿತಿ ಇಲ್ಲ. ಆದರೆ ಕನಿಷ್ಠ 42 ಜನ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ರಾಯಗಡ ಜಿಲ್ಲಾಧಿಕಾರಿ ಸತಿಶ್ ವಾಗಲ್ ಅವರು ಹೇಳಿದ್ದಾರೆ.