'ಮಹಾಭಾರತ' ವೀಕ್ಷಿಸುತ್ತಿದ್ದ ನೌಕರನನ್ನು ಕೆಲಸದಿಂದ ವಜಾ ಮಾಡಿದ ದೆಹಲಿ ಸರ್ಕಾರ

ಕಚೇರಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಕಂಪ್ಯೂಟರ್ ನಲ್ಲಿ ಮಹಾಭಾರತ ನೋಡುತ್ತಿದ್ದ ಡಾಟಾ ಆಪರೇಟರ್ ನನ್ನು ದೆಹಲಿ ಸರ್ಕಾರ ವಜಾಗೊಳಿಸಿದೆ...
ಮಹಾಭಾರತ
ಮಹಾಭಾರತ
Updated on: 

ನವದೆಹಲಿ: ಕಚೇರಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಕಂಪ್ಯೂಟರ್ ನಲ್ಲಿ ಮಹಾಭಾರತ ನೋಡುತ್ತಿದ್ದ ಡಾಟಾ ಆಪರೇಟರ್ ನನ್ನು ದೆಹಲಿ ಸರ್ಕಾರ ವಜಾಗೊಳಿಸಿದೆ.

ದೆಹಲಿ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆಹಾರ ಮತ್ತು ನಾಗರಿಕ ಇಲಾಖೆ ಕಚೇರಿಗೆ ಭೇಟಿ ನೀಡಿ ಪಡಿತರ ಚೀಟಿ ವಿತರಣೆ ಬಗ್ಗೆ ಪರಿಶೀಲನೆ ನಡೆಸಲು ತೆರಳಿದ್ದರು.

ಈ ವೇಳೆ ಡಾಟಾ ಆಪರೇಟರ್ ಕಚೇರಿಯಲ್ಲಿ ಕುಳಿತು ಕಂಪ್ಯೂಟರ್ ನಲ್ಲಿ ಮಹಾಭಾರತ ನೋಡುತ್ತಾ ಕುಳಿತಿದ್ದ. ಈ ವೇಳೆ ಸದ್ದಿಲ್ಲದೇ ಕೊಠಡಿ ಒಳಗೆ ಬಂದು, ಆತನನ್ನು ತಟ್ಟಿ ಮಾತನಾಡಿಸಿದ ಮನೀಶ್ ಸಿಸೋಡಿಯಾ, ಇದು ಸಿನಿಮಾ ನೋಡುವ ಸ್ಥಳನಾ?  ಪಡಿತರ ಚೀಟಿಗಾಗಿ ಹೊರಗಡೆ ಜನ ಕ್ಯೂ ನಲ್ಲಿ ನಿಂತಿದ್ದಾರೆ. ನೀನು ಇಲ್ಲಿ ಸಿನಿಮಾ ನೋಡುತ್ತಾ ಕುಳಿತಿದ್ದಿಯಾ ಎಂದು ಹೇಳಿದ್ದಾರೆ. ಕೂಡಲೇ ಆತನನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕೆಲಸದಿಂದ ವಜಾ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com