ಆರ್ ಬಿಐ ಗವರ್ನರ್ ನೇಮಕ: ಮೋದಿ, ಜೇಟ್ಲಿಯಿಂದ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್

ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೂತನ ಗವರ್ನರ್‌ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಪ್ರಧಾನಿ ನರೇಂದ್ರ ...
ಅರುಣ್ ಜೈಟ್ಲಿ ಮತ್ತು ನರೇಂದ್ರ ಮೋದಿ
ಅರುಣ್ ಜೈಟ್ಲಿ ಮತ್ತು ನರೇಂದ್ರ ಮೋದಿ
Updated on

ನವದೆಹಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೂತನ ಗವರ್ನರ್‌ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಗವರ್ನರ್‌ ರಘುರಾಂ ರಾಜನ್‌ ಅವರ ಅಧಿಕಾರಾವಧಿ ಸೆಪ್ಟೆಂಬರ್‌ 4ರಂದು ಮುಕ್ತಾಯವಾಗಲಿದೆ. ಹೀಗಾಗಿ, ಅದಕ್ಕೂ ಮುನ್ನವೇ ನೂತನ ಗವರ್ನರ್‌ ನೇಮಕ ಮಾಡುವ ಕುರಿತು ಪ್ರಧಾನಿ ನಿವಾಸದಲ್ಲಿ  ಮೋದಿ ಮತ್ತು ಜೇಟ್ಲಿ ಅವರು ಮಹತ್ವದ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೇಟ್ಲಿ, ಹೆಸರು ಅಂತಿಮ ಆದ ಬಳಿಕ ತಿಳಿಸಲಾಗುವುದು ಎಂದರು.

ಆರ್ ಬಿಐ ನಿಯಮದ ಪ್ರಕಾರ, ಹಣಕಾಸು ಸಚಿವರ ಜೊತೆಗಿನ ಸಮಾಲೋಚನೆ ನಂತರ ಪ್ರಧಾನಿ ಅವರು ಗವರ್ನರ್ ಆಯ್ಕೆ ಮಾಡಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com