ಗುಜರಾತಿನ ಅದನಿ ಥರ್ಮಲ್ ಘಟಕಕ್ಕೆ ಕಲ್ಲಿದ್ದಲು ತಂದಿದ್ದ ಸರಕು ಸಾಗಣೆ ಹಡಗು 2011ರ ಆಗಸ್ಟ್ 4ರಂದು ದಕ್ಷಿಣ ಮುಂಬೈ ತೀರದಿಂದ 20 ನಾಟಿಕಲ್ ಮೈಲು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳಗಿತ್ತು. ಹಡಗಿನಿಂದ ಸೋರಿಕೆಯಾದ ತೈಲದಿಂದ ಸಮುದ್ರದ ನೀರು ಮಲಿನಗೊಂಡು ಸಹಸ್ರಾರು ಜಲಚರಗಳ ಸಾವು ಸಂಭವಿಸಿತ್ತು. ಪನಾಮಾ ನೋಂದಣಿಯ ಎಂವಿ ರಾಕ್ ಹಡಗಿನಲ್ಲಿ 60,000 ಟನ್ ಇಂಡೋನೇಷ್ಯ ಕಲ್ಲಿದ್ದಲನ್ನು ಅದನಿ ಎಂಟರ್ ಪ್ರೖೆಸಸ್ ಲಿಮಿಟೆಡ್ಗಾಗಿ ಸಾಗಿಸಲಾಗುತ್ತಿತ್ತು.