40 ವರ್ಷ ಹಿಂದಕ್ಕೆ ಹೋಲಿಸಿದರೆ ಈಗ ಗ್ರಾಮೀಣ ಭಾರತದಲ್ಲಿ ಪೌಷ್ಠಿಕ ಆಹಾರದ ಕೊರತೆ ಹೆಚ್ಚು

ಭಾರತ ಇತ್ತೀಚಿಗಷ್ಟೇ 70ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದು, ಅತ್ಯಂತ ವೇಗವಾಗಿ ಅಭಿವೃದ್ದಿಯನ್ನೂ ಸಾಧಿಸುತ್ತಿದೆ. ಆದರೆ ಗ್ರಾಮೀಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಭಾರತ ಇತ್ತೀಚಿಗಷ್ಟೇ 70ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದು, ಅತ್ಯಂತ ವೇಗವಾಗಿ ಅಭಿವೃದ್ದಿಯನ್ನೂ ಸಾಧಿಸುತ್ತಿದೆ. ಆದರೆ ಗ್ರಾಮೀಣ ಭಾರತದಲ್ಲಿ ಶೇ,70ರಷ್ಟು(833 ಮಿಲಿಯನ್ ಭಾರತೀಯರು) ಭಾರತೀಯರು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಪೌಷ್ಠಿಕ ನಿರ್ವಹಣಾ ಮಂಡಳಿ(ಎನ್ಎನ್ಎಂಬಿ) ಸಮೀಕ್ಷೆ ಹೇಳಿದೆ.
1975-79ಕ್ಕೆ ಹೋಲಿಕೆ ಮಾಡಿದರೆ, ಗ್ರಾಮೀಣ ಭಾರತದಲ್ಲಿ ಸರಾಸರಿ 550ಕ್ಕಿಂತ ಕಡಿಮೆ ಕ್ಯಾಲೊರಿಯ ಆಹಾರ ಸೇವಿಸುತ್ತಿದ್ದಾರೆ. 13 ಗ್ರಾಂ ಪ್ರೋಟೀನ್, 5 ಮಿಗ್ರಾಂ ಕಬ್ಬಿಣ, 250 ಮಿಗ್ರಾಂ ಕ್ಯಾಲ್ಸಿಯಂ ಮತ್ತು 500 ಮಿಗ್ರಾಂ ಪೌಷ್ಠಿಕ ಆಹಾರ ಬಳಸಲಾಗುತ್ತದೆ. 
ಮೂರು ವರ್ಷದೊಳಗಿನ ಮಕ್ಕಳು ಸರಾಸರಿ ನಿತ್ಯ 300 ಎಂಎಲ್ ಹಾಲು ಸೇವಿಸಬೇಕು. ಆದರೆ ಪ್ರಸ್ತೂತ ಕೇವಲ 80 ಎಂಎಲ್ ಮಾತ್ರ ಸೇವಿಸುತ್ತಿದ್ದಾರೆ ಮತ್ತು ಶೇ,42ರಷ್ಟು ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ. ಅಲ್ಲದೆ ಶೇ.35ರಷ್ಟು ಗ್ರಾಮೀಣ ಯುವತಿಯರು ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.
2014ರಲ್ಲಿ ಅಜೀವಿಕಾ ಮಂಡಳಿ ರಾಜಸ್ಥಾನದ ನಾಲ್ಕು ಗ್ರಾಮ ಪಂಚಾಯತ್ ಗಳಲ್ಲಿ ನಡೆದ ಸಮೀಕ್ಷೆ ಪ್ರಕಾರ, 500 ತಾಯಂದಿರ ಪೈಕಿ ಅರ್ಧದಷ್ಟು ಮಹಿಳೆಯರು ದ್ವಿದಳ ದಾನ್ಯಗಳನ್ನು, ತರಕಾರಿ ಸೇವಿಸಿಲ್ಲ. ಇನ್ನೂ ಯಾರೊಬ್ಬರು ಹಣ್ಣು ಮತ್ತು ಮೊಟ್ಟೆ ಸೇವಿಸದಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ದೇಶದ 10 ರಾಜ್ಯಗಳಲ್ಲಿ ಪೌಷ್ಠಿಕ ಆಹಾರದ ನಿರ್ವಹಣೆಗಾಗಿ 1972ರಲ್ಲಿ ಎನ್ಎನ್ಎಂಬಿ ಸ್ಥಾಪಿಸಲಾಗಿದ್ದು, ಅಂದಿನಿಂದ ಇದುವರೆಗೆ ಮೂರು ಭಾರಿ 1975-79, 1996-97 ಹಾಗೂ 2011-2012ರಲ್ಲಿ ಸಮೀಕ್ಷೆ ನಡೆಸಿದ್ದು, ಪ್ರತಿವರ್ಷ ಪೌಷ್ಠಿಕ ಆಹಾರದ ಕೊರತೆ ಹೆಚ್ಚುತ್ತಾ ಹೋಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com