ಸಾಮಾನ್ಯ ತರಬೇತಿಯೆ ಹೊರತು ದಿಢೀರ್ ಕಾರ್ಯಾಚರಣೆಯಲ್ಲ; ಸೇನೆ ವಿಚಾರದಲ್ಲಿ ವಿವಾದ ಬೇಡ: ಪರಿಕ್ಕರ್

ಪಶ್ಚಿಮ ಬಂಗಾಳದಲ್ಲಿ ಸೇನೆ ನಿಯೋಜನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹಕ್ ಪರಿಕ್ಕರ್ ಅವರು, ಇದು ಸೈನಿಕರ ಸಾಮಾನ್ಯ ತರಬೇತಿಯೇ ಹೊರತು ದಿಢೀರ್ ಕಾರ್ಯಾಚರಣೆಯಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸೇನೆ ನಿಯೋಜನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹಕ್ ಪರಿಕ್ಕರ್ ಅವರು, ಇದು ಸೈನಿಕರ ಸಾಮಾನ್ಯ ತರಬೇತಿಯೇ ಹೊರತು ದಿಢೀರ್ ಕಾರ್ಯಾಚರಣೆಯಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಸಂಸತ್ತಿನ ಉಭಯ ಸದನಗಳಿಗೆ ಮಾಹಿತಿ ನೀಡಿರುವ ಮನೋಹರ್ ಪರಿಕ್ಕರ್ ಅವರು, ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆ ದೇಶದ ವಿವಿಧ ರಾಜ್ಯಗಳಲ್ಲಿ ಇಂತಹ ತರಬೇತಿ ನಡೆಸಿಕೊಂಡು  ಬಂದಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ತರಬೇತಿ ನಡೆಸಲಾಗುತ್ತಿದೆ. ಕಳೆದ ವರ್ಷದ ನವೆಂಬರ್ 19 ಮತ್ತು 21ರಂದೂ ಕೂಡ ಇದೇ ತರಬೇತಿ ನಡೆಸಿತ್ತು. ಈ ಬಾರಿ ಕೂಡ ಇದಕ್ಕೆ ವ್ಯವಸ್ಥೆ ಕಲ್ಪಿಸಿ ಡಿಸೆಂಬರ್ 28, 29 ಮತ್ತು  30ರಂದು ತರಬೇತಿ ನಡೆಸಲು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ದಿನಾಂಕವನ್ನು ಡಿಸೆಂಬರ್ 1, 2 ಮತ್ತು 3ಕ್ಕೆ ನಿಗದಪಡಿಸಲಾಯಿತು. ಹೀಗಾಗಿ ಈ ವಿಚಾರದಲ್ಲಿ ಸುಖಾಸುಮ್ಮನೆ ವಿವಾದ ಸೃಷ್ಟಿ ಬೇಡ ಎಂದು  ಅವರು ಹೇಳಿದರು.

ಇಂತಹುದೇ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ಕೂಡ ನೀಡಿದ್ದು, ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಮೇಜರ್ ಜನರಲ್ ಸುನಿಲ್ ಯಾದವ್ ಅವರು,  ಇದೊಂದು ವಾರ್ಷಿಕ ಕಾರ್ಯಕ್ರಮವಾಗಿದೆ. ಪ್ರತೀ ವರ್ಷ ಭಾರತೀಯ ಸೇನೆ ವಿವಿಧ ರಾಜ್ಯಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ. ಕಳೆದ ನವೆಂಬರ್ 19ರಿಂದ 25ರವರೆಗೂ ನಾವು ಇದೇ ತರಬೇತಿ ನಡೆಸಿದ್ದೆವು.  ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಅಷ್ಟೇ ಮಂದಿ ಸಿಬ್ಬಂದಿಗಳು ತರಬೇತಿ ನಡೆಸಿದ್ದರು. ಈ ಹಿಂದೆ ಜಾರ್ಖಂಡ್ ಮತ್ತು ಬಿಹಾರದಲ್ಲೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಪ ನಿರಾಕರಿಸಿದ ಸೇನೆ
ಇದೇ ವೇಳೆ ಟೋಲ್ ಬೂತ್ ಗಳಲ್ಲಿ ಸೈನಿಕರು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸುನಿಲ್ ಯಾದವ್ ಅವರು, ಇದೊಂದು ನಿರಾಧಾರ ಆರೋಪವಾಗಿದೆ. ಯಾವುದೇ ಬೂತ್ ನಲ್ಲೂ  ಸೈನಿಕರು ಹಣ ಸಂಗ್ರಹಿಸಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com