ರು.10 ಲಕ್ಷ ಮೌಲ್ಯದ ಸೂಟು ಧರಿಸುವ ಮೋದಿ ಫಕೀರ ಹೇಗಾಗುತ್ತಾರೆ?: ಕೇಜ್ರಿವಾಲ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಫಕೀರನೆಂದು ಕರೆದುಕೊಳ್ಳುತ್ತಾರೆ, ಆದರೆ, ರು.10 ಲಕ್ಷ ಮೌಲ್ಯದ ಸೂಟು ಧರಿಸಿ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಾರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು...
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಫಕೀರನೆಂದು ಕರೆದುಕೊಳ್ಳುತ್ತಾರೆ, ಆದರೆ, ರು.10 ಲಕ್ಷ ಮೌಲ್ಯದ ಸೂಟು ಧರಿಸಿ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಾರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮೋದಿಯವರೇ ನಿಮ್ಮನ್ನು ನೀವೇ ಫಕೀರನೆಂದು ಹೇಳಿಕೊಳ್ಳುತ್ತೀರ. ಆದರೆ, ರು. 10 ಲಕ್ಷದ ಸೂಟುಗಳನ್ನು ಧರಿಸಿ, ವಿಶ್ವದೆಲ್ಲಡೆ ಪ್ರವಾಸ ಕೈಗೊಳ್ಳುತ್ತೀರಿ. ನಿಮ್ಮ ಮಾತಿನ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.

ಕಪ್ಪುಹಣವನ್ನು ಹೊಂದಿರುವ ಜನರ ವಿರುದ್ಧ ತಿರುಗಿ ಬಿದ್ದ ಕಾರಣಕ್ಕೆ ನನ್ನನ್ನು ಗುರಿ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದಾದ ಮೇಲೊಂದರಂತೆ ಸಂಸ್ಥೆಗಳನ್ನು ನಾಶಪಡಿಸುತ್ತಿದ್ದಾರೆ. ಆರ್"ಬಿಐ, ಸಿಬಿಐ, ವಿಶ್ವವಿದ್ಯಾಲಯಗಳು ಇದೀಗ ನ್ಯಾಯಾಂಗವನ್ನು ಸಾಯಿಸುತ್ತಿದ್ದಾರೆ. ಕಳೆದ 65 ವರ್ಷಗಳಿಂದ ಏನನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ಮೋದಿಯವರು 5 ವರ್ಷದಲ್ಲಿ ಮಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com