ಅರುಣಾಚಲಪ್ರದೇಶಕ್ಕೆ ಕರ್ಮಪಾ ಭೇಟಿ: ಬೀಜಿಂಗ್ ನಿಂದ ಎಚ್ಚರಿಕೆ

ಕರ್ಮಪಾ ಟಿಬೇಟಿಯನ್‌ ಧರ್ಮಗುರು 17 ನೇ ಗ್ಯಾಲವಾಂಗ್‌ ಕರ್ಮಪಾ ಒಗೆನ್‌ ಟ್ರಿನ್ಲೆ ಡೋರ್ಜೆ, ಎರಡು ದಿನಗಳ ಅರುಣಾಚಲ ಪ್ರದೇಶದ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ.
ಅರುಣಾಚಲಪ್ರದೇಶಕ್ಕೆ ಕರ್ಮಪಾ ಭೇಟಿ
ಅರುಣಾಚಲಪ್ರದೇಶಕ್ಕೆ ಕರ್ಮಪಾ ಭೇಟಿ
Updated on: 
ಬೀಜಿಂಗ್: ಕರ್ಮಪಾ ಟಿಬೇಟಿಯನ್‌ ಧರ್ಮಗುರು 17 ನೇ ಗ್ಯಾಲವಾಂಗ್‌ ಕರ್ಮಪಾ ಒಗೆನ್‌ ಟ್ರಿನ್ಲೆ ಡೋರ್ಜೆ, ಎರಡು ದಿನಗಳ ಅರುಣಾಚಲ ಪ್ರದೇಶದ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ. ಈ ಬೆನ್ನಲ್ಲೇ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಗಡಿಗೆ ಸಂಬಂಧಿಸಿದ ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 
ಗಡಿ ವಿವಾದವನ್ನು ಮತ್ತಷ್ಟು ಜಟಿಲಗೊಳಿಸುವುದರಿಂದ ಭಾರತ ಅಂತರ ಕಾಯ್ದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಚೀನಾದ ವಿದೇಶಾಂಗ ಸಚಿವ ಲು ಕಾಂಗ್ ಹೇಳಿದ್ದಾರೆ. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕೆಂಬುದು ಚೀನಾದ ಆಶಯವಾಗಿದೆ. ಆದರೆ ಕರ್ಮಪಾ ಅವರು ಅರುಣಾಚಲ ಪ್ರದೇಶಕ್ಕೆ ತೆರಳಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವುದು ಚೀನಾಗೆ ಆತಂಕ ಮೂಡಿಸಿದೆ ಎಂದು ಲು ತಿಳಿಸಿದ್ದಾರೆ. 
ಕರ್ಮಪಾ ಅವರೊಂದಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಹ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com