ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ದೆಹಲಿ ನಿವಾಸದಲ್ಲಿ ಕಳ್ಳತನ: ದೂರು ದಾಖಲು

ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಮನೆಯಲ್ಲಿ ಕಳೆದ ನವೆಂಬರ್ 29ರಂದು ಕಳ್ಳತನವಾಗಿದ್ದು...
ಕಾಂಗ್ರೆಸ್ ಸಂಸದ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್
Updated on
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮನೆಯಲ್ಲಿ ಕಳೆದ ನವೆಂಬರ್ 29ರಂದು ಕಳ್ಳತನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 380/457ರಡಿಯಲ್ಲಿ ದೆಹಲಿ ಪೊಲೀಸರು ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೆಹಲಿಯ ಲೊಧಿ ಎಸ್ಟೇಟ್ ನಲ್ಲಿರುವ ಶಶಿ ತರೂರ್ ಅವರ ಮನೆಯಿಂದ ಹಲವು ಬೆಲೆಬಾಳುವ ವಸ್ತುಗಳು, ದುಬಾರಿ ಮೂರ್ತಿಗಳು ಕಳ್ಳತನವಾಗಿದೆ. 
ಕಳ್ಳರು ತರೂರ್ ಅವರ ಅಧಿಕೃತ ನಿವಾಸದ ಗೋಡೆಯ ಮೇಲೇರಿ ಮುಂದಿನ ಬಾಗಿಲನ್ನು ಮುರಿದು ಅವರ ಖಾಸಗಿ ಕಚೇರಿಯೊಳಗೆ ಪ್ರವೇಶಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತರೂ ರ್ ಅವರಿಗೆ ಪ್ರಧಾನ ಮಂತ್ರಿಗಳು ಗಾಂಧಿ ಗ್ಲಾಸುಗಳನ್ನು ನೀಡಿದ್ದರು.
ಪುರಾತನ ಕಾಲದ ನಟರಾಜ ಮೂರ್ತಿಗಳು, 12 ಸಣ್ಣ ಗಣೇಶನ ವಿಗ್ರಹಗಳು, ಹತ್ತು ಸಣ್ಣ ಹನುಮನ ಮೂರ್ತಿಗಳು, 12 32ಜಿಬಿಯ ಪೆನ್ ಡ್ರೈವ್ ಮತ್ತು ಇಂಟರ್ನೆಟ್ ಡಾಂಗಲ್ ಗಳ ಕಳ್ಳತನವಾಗಿದೆ. 
ಘಟನೆ ಬಗ್ಗೆ ತಿಳಿದ ತುಘಲಕ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com