

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ‘ಈದ್ ಮಿಲಾದ್’ ರಜೆಯನ್ನು ಮಂಗಳವಾರಕ್ಕೆ ಬದಲಾಗಿ 12ರಂದು ಸೋಮವಾರ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಸರ್ಕಾರ ಬುಧವಾರ ಸುತ್ತೋಲೆ ಹೊರಡಿಸಿದೆ. ‘ಈದ್ ಮಿಲಾದ್ ರಜೆಯನ್ನು ಡಿ. 13ರಂದು ನಿಗದಿಪಡಿಸಿ ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈದ್ ಮಿಲಾದ್ ಡಿ. 12ರಂದು ಇರುವುದರಿಂದ ಸೋಮವಾರ ರಜೆ ಘೋಷಿಸಿದೆ.
ಹೀಗಾಗಿ ವಾರಂತ್ಯದ ಎರಡು ರಜೆಗಳ ಜೊತೆಗೆ ಸೋಮವಾರ ಸೇರಿ ಒಟ್ಟು ಮೂರು ದಿನಗಳ ರಜೆ ಸಿಗಲಿದೆ.