ನೋಟು ನಿಷೇಧ ಕುರಿತು ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪ ಆಗುತ್ತೆ: ರಾಹುಲ್ ಗಾಂಧಿ

ನಾನು ಲೋಕಸಭೆಯಲ್ಲಿ ಮಾತನಾಡಲು ಬಯಸುತ್ತಿದ್ದೇನೆ, ಆದರೆ ಸರ್ಕಾರ ನನಗೆ ಅವಕಾಶ ನೀಡುತ್ತಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ನಾನು ಲೋಕಸಭೆಯಲ್ಲಿ ಮಾತನಾಡಲು ಬಯಸುತ್ತಿದ್ದೇನೆ, ಆದರೆ ಸರ್ಕಾರ ನನಗೆ ಅವಕಾಶ ನೀಡುತ್ತಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಂಸತ್ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನಾಣ್ಯೀಕರದ ಬಗ್ಗೆ ಚರ್ಚೆ ನಡೆಸಬೇಕು ಎಂಬ ಉದ್ದೇಶದಿಂದ ಕಳೆದ ಒಂದು ತಿಂಗಳಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ದೇಶದ ಎಲ್ಲಾ ಕಡೆ ಪ್ರದಾನಿ ಮೋದಿಗೆ ಭಾಷಣ ಮಾಡಲು ಆಗುತ್ತದೆ, ಆದರೆ ಲೋಕಸಭೆಗೆ ಬರಲು ಭಯ ಪಡುತ್ತಿದ್ದಾರೆ, ಲೋಕಸಭೆಯಲ್ಲಿ ಕುಳಿತು ಕೊಳ್ಳಲು ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿ ಅವರ ಆತಂಕಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ ಮೊದಲು ಕಪ್ಪು ಹಣ ಬಗ್ಗೆ ಮಾತನಾಡಿದರು. ಆದರೆ ಈಗ ನಗದು ರಹಿತ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ, ನಾನು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಲು ಆರಂಭಿಸಿದರೇ ಪ್ರಧಾನಿ ಮೋದಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ವಿರುದ್ಧ ನೇರವಾಗಿ ಆರೋಪಿಸಿದ್ದಾರೆ.

ನಾವು ಲೋಕಸಭೆಯಲ್ಲಿ ಚರ್ಚೆ ಆರಂಭಿಸದರೇ ಸರ್ಕಾರ ಹೆದರಿ ಪಲಾಯಮ ಮಾಡುತ್ತದೆ, ನಾನು ಮೋದಿ ಅವರ ಹಗರಣದ ಬಗ್ಗೆ ಮಾತನಾಡುತ್ತೇನೆ, ನಾನು ಸಂಸತ್ತಿನಲ್ಲಿ ಮಾತನಾಡುವಾಗ ಭೂಕಂಪ ಆಗುವುದು ಖಚಿತ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com