ಮುಂಬೈ: ದೇಶಾದ್ಯಂತ ನೋಟು ನಿಷೇಧ ಬಳಿಕ ನಡೆದ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.
ನೋಟು ನಿಷೇಧಗೊಂಡ ನಂತರ ಕಾಳಧನಿಕರಿಗೆ ಬ್ಯಾಂಕಿನವರರೇ ಸಹಕರಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನವೆಂಬರ್ 8 ರಿಂದ ಡಿಸೆಂಬರ್ 30ರವರೆಗಿನ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡಿ ಆರ್‌ಬಿಐ ಯಾವಾಗ ಬೇಕಾದರೂ ಮಾಹಿತಿಯನ್ನು ಕೇಳಬಹುದು ಎಂದು ಬ್ಯಾಂಕ್ ಗಳಿಗೆ ಹೇಳಿದೆ.
ಅಕ್ಟೋಬರ್ 27 ಅಪೆಕ್ಸ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳ ಬ್ಯಾಂಕಿಂಗ್ ಹಾಲ್, ಕೌಂಟರ್ ಮತ್ತು ಎಲ್ಲಾ ಜಾಗಗಳಲ್ಲಿಯೂ ಸಿಸಿಟಿವಿಯನ್ನು ಅಳವಡಿಸುವಂತೆ ಸೂಚಿಸಿತ್ತು. ನಕಲಿ ದಾಖಲೆ ನೀಡುವ ವ್ಯಕ್ತಿಗಳನ್ನು ಗುರುತಿಸಲುವ ಸಲುವಾಗಿ ಈ ನಿರ್ಣಯವನ್ನು ಅಪೆಕ್ಸ್ ಬ್ಯಾಂಕ್ ತಿಳಿಸಿತ್ತು.