ಆಂಧ್ರಪ್ರದೇಶ ಅಬಕಾರಿ ಉಪಾಯುಕ್ತರ ಮನೆ ಮೇಲೆ ಎಸಿಬಿ ದಾಳಿ, ಭಾರಿ ಪ್ರಮಾಣದ ಆಸ್ತಿ ಪತ್ತೆ

ನೋಟು ನಿಷೇಧ ಬಳಿಕ ಕಾಳಧನಿಕರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರದ 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ನಿರತ ಎಸಿಬಿ ಅಧಿಕಾರಿಗಳು
ದಾಳಿ ನಿರತ ಎಸಿಬಿ ಅಧಿಕಾರಿಗಳು
Updated on: 

ಹೈದರಾಬಾದ್: ನೋಟು ನಿಷೇಧ ಬಳಿಕ ಕಾಳಧನಿಕರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರದ 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಆಂಧ್ರ ಪ್ರದೇಶದ ಅಬಕಾರಿ ಉಪಾಯುಕ್ತ ಕೆಎಲ್ ಭಾಸ್ಕರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಎಲ್ ಭಾಸ್ಕರ್  ಅವರ ಸಂಬಂಧಿಕರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಇಲ್ಲಿ ಅಪಾರ ಪ್ರಮಾಣದ ನಗದು, ಆಸ್ತಿ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಶನಿವಾರ ಆಂಧ್ರ ಪ್ರದೇಶದಲ್ಲಿ ನಡೆದ ಎಸಿಬಿ ದಾಳಿ ವೇಳೆ ಸಿಕ್ಕ ಸಣ್ಣ ಮಾಹಿತಿಯನ್ನಾಧರಿಸಿ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದು, ವಿಶಾಖಪಟ್ಟಣ, ವಿಜಯವಾಡ, ಪಶ್ಚಿಮ ಗೋದಾವರಿ ಹಾಗೂ ಹೈದರಾಬಾದ್ ಸೇರಿದಂತೆ ಒಟ್ಟು 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಅಬಕಾರಿ ಉಪಾಯುಕ್ತ ಕೆಎಲ್ ಭಾಸ್ಕರ್ ಅವರಿಗೆ ಸೇರಿದೆ 2 ದುಬಾರಿ ಫ್ಲಾಟ್ ಗಳು, 10 ಮನೆಗಳ ಆಸ್ತಿ ಪತ್ರಗಳು, 4.5 ಎಕರೆ ಕೃಷಿ ಭೂಮಿ ಪತ್ರಗಳು ಸೇರಿದಂತೆ 9 ಲಕ್ಷ ನಗದು, ಹಾಗೂ 3 ಕೆಜಿ ಚಿನ್ನ, 15 ಕೆಜಿ ಬೆಳ್ಳಿ ಮತ್ತು 29 ಬಾಟಲ್ ವಿದೇಶಿ ಮದ್ಯ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಂತೆಯೇ ವಿವಿಧ ಸಂಸ್ಥೆಗಳಲ್ಲಿ ಕೆಎಲ್ ಭಾಸ್ಕರ್ ಅವರು ಹೊಂದಿರುವ 23 ಲಕ್ಷ ಮೌಲ್ಯದ ಷೇರು ಪತ್ರಗಳು, 3 ಲಕ್ಷ ಮೌಲ್ಯದ ಎಲ್ ಐಸಿ ಪಾಲಿಸಿ ಪತ್ರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com