ಗುವಾಹತಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಅಸ್ಸಾಂ ಇಬ್ಬರು ಉದ್ಯಮಿಗಳ ಮನೆ ದಾಳಿ ನಡೆಸಿದ್ದು, ದಾಳಿಯ ವೇಳೆ 2.35 ಕೋಟಿ ರುಪಾಯಿ ಹೊಸ ನೋಟ್ ಗಳನ್ನು ಜಪ್ತಿ ಮಾಡಿದ್ದು, ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಅಸ್ಸಾಂನಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ, ನಗೋಣ್ ಜಿಲ್ಲೆಯ ನಗೋಣ್ ಬಾರಬಜಾರ್ ನ ಉದ್ಯಮಿಗಳ ಮೇಲೆ ದಾಳಿ ನಡೆಸಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ದಾಳಿಯ ವೇಳೆ 2.29 ಕೋಟಿ ರುಪಾಯಿ 2000 ಮುಖಬೆಲೆಯ ನೋಟ್ ಗಳು ಹಾಗೂ ಒಂದು ಲಕ್ಷ ರುಪಾಯಿ ಹೊಸ 500 ರುಪಾಯಿ ನೋಟ್ ಗಳು ಪತ್ತೆಯಾಗಿವೆ.
ಉದ್ಯಮಿಗಳಾದ ಅಮುಲ್ಯ ದಾಸ್ ಹಾಗೂ ತಪನ್ ದಾಸ್ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.