ಆರ್ಥಿಕ ತಜ್ಞರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ: ಬಜೆಟ್, ನೋಟು ನಿಷೇಧದ ಬಗ್ಗೆ ಮುಖ್ಯ ಚರ್ಚೆ

ಆರ್ಥಿಕ ತಜ್ಞರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ನೋಟು ನಿಷೇಧ, ಬಜೆಟ್ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿರುವ ವಿಷಯಗಳಾಗಿವೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ನವದೆಹಲಿ: ಆರ್ಥಿಕ ತಜ್ಞರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ನೋಟು ನಿಷೇಧ, ಬಜೆಟ್ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರಲಿರುವ ವಿಷಯಗಳಾಗಿವೆ. 
ನ.8 ರಂದು ನೋಟು ನಿಷೇಧ ಕ್ರಮವನ್ನು ಘೋಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರೊಂದಿಗೆ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. 2017-18 ನೇ ಸಾಲಿನ ಬಜೆಟ್ ಗೆ ಆರ್ಥಿಕ ತಜ್ಞರಿಂದ ಸಲಹೆಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ಬಗ್ಗೆಯೂ ಚರ್ಚಿಸಲಿದ್ದಾರೆ. 
ನೀತಿ ಆಯೋಗದ ಸದಸ್ಯರು, ವಾಣಿಜ್ಯ, ಹಣಕಾಸು ಇಲಾಖೆ ಕಾರ್ಯದರ್ಶಿಗಳು ಸಾರ್ವಜನಿಕ ಹಣಕಾಸು ಮತ್ತು ನೀತಿನಿರೂಪಣಾ ರಾಷ್ಟ್ರೀಯ ಸಂಸ್ಥೆ (ಎನ್ಐಪಿಎಫ್ ಪಿ) ನಿರ್ದೇಶಕ ರಥಿನ್ ರಾಯ್ ಸೇರಿದಂತೆ ಹಲವು ಅಧಿಕಾರಿಗಳು, ತಜ್ಞರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com