ನೋಟು ನಿಷೇಧ ಕುರಿತು ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದರು. ನೋಟು ನಿಷೇಧದ ಕ್ರಮದಿಂದಾಗಿ ದೇಶದ ಜನರು ಕಳೆದ 50 ದಿನಗಳಲ್ಲಿ ಸುಮಾರು 20 ವರ್ಷಗಳಷ್ಟು ಹಿಂದಕ್ಕೆ ಹೋದಂತಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿಯಲ್ಲ, ಸೂಪರ್ ತುರ್ತುಪರಿಸ್ಥಿತಿ ಇದೆ. ವಿದೇಶದಿಂದ 1 ರುಪಾಯಿ ಕೂಡ ಕಪ್ಪುಹಣ ಭಾರತಕ್ಕೆ ಬಂದಿಲ್ಲ. ಸಮಸ್ಯೆ ಪರಿಹಾರಕ್ಕೆ ಮೋದಿ ಅವರು 50 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ 50 ದಿನ ಕಳೆಯುತ್ತಾ ಬಂದರೂ ಇನ್ನು ಸಮಸ್ಯೆ ಪರಿಹಾರವಾಗಿಲ್ಲ ಇದರ ನೈತಿಕ ಹೊಣೆಹೊತ್ತು ಪ್ರಧಾನಿ ಮೋದಿ ರಾಜಿನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದರು.