2,000 ರು ಹೊಸ ನೋಟುಗಳುಳ್ಳ 36 ಲಕ್ಷ ದಾಖಲೆಯಿಲ್ಲದ ಹಣ ಪತ್ತೆ

2,000 ಮುಖಬೆಲೆಯ 36 ಲಕ್ಷ ಹಣವನ್ನು ತಮಿಳುನಾಡಿನ ತ್ರಿಪುರ ಜಿಲ್ಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರನ್ನ ವಶಕ್ಕೆ ಪಡೆದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಯಂಬತ್ತೂರು: 2,000 ಮುಖಬೆಲೆಯ 36 ಲಕ್ಷ ಹಣವನ್ನು  ತಮಿಳುನಾಡಿನ ತ್ರಿಪುರ ಜಿಲ್ಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಎಂದಿನಂತೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ಕಾರೊಂದು ನಿಲ್ಲಿಸದೇ ವೇಗವಾಗಿ ಚೆಕ್ ಪೋಸ್ಟ್ ದಾಟಿ ಹೋಯಿತು, ಕಾರನ್ನು ಹಿಂಬಾಲಿಸಿದ ಪೊಲೀಸರು ಕೊನೆಗೂ ಅವರನ್ನು ಪೆರುಮನಲ್ಲೂರ್ ಬಳಿ ಹಿಡಿದಿದ್ದಾರೆ.

ನಂತರ ಕಾರನ್ನು ಪರಿಶೀಲಿಸಿದಾಗ ಅವರು ದಾಖಲೆಯಿಲ್ಲದ 36 ಲಕ್ಷ ರೂ ಹಣ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಆವರನ್ನು ವಶಕ್ಕೆ ಪಡೆದಿರುವ ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com