ಧನ್ಬಾದ್ ಬಿಜೆಪಿ ಮಹಿಳಾ ನಾಯಕಿ ಅಶ್ಲೀಲ ವಿಡಿಯೋ ಪ್ರಕರಣ: ಪಕ್ಷದಿಂದ ತನಿಖೆ

ಧನ್ಬಾದ್ ಬಿಜೆಪಿ ಮಹಿಳಾ ನಾಯಕಿಯೊರ್ವಳ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ...
ಅಶ್ಲೀಲ ವಿಡಿಯೋ
ಅಶ್ಲೀಲ ವಿಡಿಯೋ
ಧನ್ಬಾದ್: ಧನ್ಬಾದ್ ಬಿಜೆಪಿ ಮಹಿಳಾ ನಾಯಕಿಯೊರ್ವಳ ಅಶ್ಲೀಲ ವಿಡಿಯೋ ಬಿಡುಗಡೆಯಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೀಗ ಜಾರ್ಖಂಡ್ ರಾಜ್ಯ ರಾಜಕಾರಣದಲ್ಲಿ ಈ ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಬಿಜೆಪಿ ಪಕ್ಷದ ಮುಖಂಡೆ ಗೀತಾ ಸಿಂಗ್ ಧನ್ಬಾದ್ನ ಉನ್ನತ ಹುದ್ದೆಗೇರಿದ ಒಂದು ದಿನದ ನಂತರ ಈ ವಿಡಿಯೋ ಬಿಡುಗೆಯಾಗಿದ್ದು, ಇದೊಂದು ರಾಜಕೀಯ ಪಿತ್ತೂರಿಯಾಗಿದ್ದು ರಾಜಕೀಯವಾಗಿ ನನ್ನನ್ನು ತುಳಿಯುವ ಯತ್ನವಾಗಿದೆ ಎಂದು ಹೇಳಿದ್ದಾರೆ. 
ವಿಡಿಯೋ ಕುರಿತಂತೆ ಮಾತನಾಡಿರುವ ಬಿಜೆಪಿ ಮುಖಂಡ ಚಂದ್ರಶೇಖರ್ ಸಿಂಗ್ ಅವರು ವಿಡಿಯೋವನ್ನು ನಾನು ನೋಡಿದ್ದು ಇದರ ಕುರಿತು ಪಕ್ಷ ತನಿಖೆ ನಡೆಸಲಿದೆ. ಆರೋಪ ಸಾಬೀತಾದರೆ ಗೀತಾ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com