ಅಹಮದಾಬಾದ್: ಗುಜರಾತ್ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದ್ದು ಬಿಜೆಪಿ ಶೇಖಕ 80 ರಷ್ಟು ಸೀಟುಗಳನ್ನು ಗಳಿಸಲಿದೆ ಎಂದು ಬಿಜೆಪಿ ಹೇಳಿದೆ.
ಮತ ಎಣಿಕೆ ಕುರಿತಂತೆ ಗುಜರಾತ್ ನ ಬಿಜೆಪಿ ಘಟಕ ಬಿಜೆಪಿ ಪಕ್ಷ 80.12ರಷ್ಟು ಸೀಟುಗಳನ್ನು ಪಡೆದು ಅಧಿಕಾರ ನಡೆಸಲಿದೆ ಎಂದು ಟ್ವೀಟ್ ಮಾಡಿದೆ.
ಕಳೆದ ವರ್ಷದ ಚುನಾವಣೆಯಲ್ಲಿ ಬಿಜೆಪಿ 77 ರಷ್ಟು ಮತಗಳನ್ನು ಪಡೆದಿದ್ದು ಆದರೆ ಈ ಬಾರಿ ಶೇಖಡ 80ರಷ್ಟು ಸೀಟುಗಳನ್ನು ಪಡೆಯಲಿದೆ.
ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯ್ತಿ ಮತ ಎಣಿಕೆ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದು ಈ ಬಾರಿ ನರ್ಮದ ಜಿಲ್ಲೆಯಲ್ಲಿ ಶೇಖಕ 87.45ರಷ್ಟು ಮತದಾನವಾಗಿದ್ದರೆ. ಬಾವ್ನಗರ್ ಶೇಖಡ 70.47ರಷ್ಟು ಮತದಾನವಾಗಿದ್ದು ಇದು ಅಲ್ಪ ಮಟ್ಟದ ಮತದಾನವಾಗಿದೆ.
ಗುಜರಾತ್ ನಾದ್ಯಂತ 53,116 ವಾರ್ಡ್ ಗಳಿಂದ 1.20 ಲಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇನ್ನು 8,527 ಸರ್ಪಂಚ ಸೀಟುಗಳಿಗೆ 26,800 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.