

ನವದೆಹಲಿ: ಹಿಂದೂ ಹಾಗೂ ಮುಸ್ಲಿಮರನ್ನು ಬೇರ್ಪಡಿಸುವುದೇ ಮೋದಿ ಹಾಗೂ ಆರ್ಎಸ್ಎಸ್ ಮುಖ್ಯ ಗುರಿಯಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಕೇರಳದ ಕಾಂಗ್ರೆಸ್ ಸಮಿತಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಅವರು, ವಿಧಾನಸಭಾ ಚುನಾವಣೆ ನಡೆಯುವ ವೇಳೆಯಲ್ಲಿ ಮೋದಿಯವರು ಹಿಂದೂ ಹಾಗೂ ಮುಸ್ಲಿಮರನ್ನು ವಿಭಜಿಸುವ ವಿಷಕಾರಿಕ ಪ್ರಚಾರವನ್ನು ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಎರಡು ರೀತಿಯ ಪ್ರಚಾರ ಕಾರ್ಯವನ್ನು ಮಾಡುತ್ತದೆ. ಒಂದು ಪ್ರಚಾರದ ಬೆಳವಣಿಗೆ ಮತ್ತೊಂದು ವಿಷಕಾರಿಕ ಪ್ರಚಾರ. ಪ್ರಧಾನಿ ಮೋದಿ ಹಾಗೂ ಆರ್ಎಸ್ಎಸ್ ಅವರಿಗೆ ಮುಸ್ಲಿಮರು ಹಾಗೂ ಹಿಂದೂಗಳನ್ನು ವಿಭಜಿಸುವುದೇ ಮುಖ್ಯ ಗುರಿಯಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ.
ಬಿಹಾರ, ಉತ್ತರ ಪ್ರದೇಶ, ಅಸ್ಸಾಂಗಳಲ್ಲಿ ಈ ಪ್ರಯತ್ನವನ್ನು ಮಾಡಿರುವ ಅವರು, ಇದೀಗ ಬಂಗಾಳದಲ್ಲೂ ವಿಭಜಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಎಲ್ಲಿಯೇ ಹೋದರು ಅಲ್ಲಿ ಎರಡು ರೀತಿಯ ಪ್ರಚಾರಗಳು ನಡೆಯುತ್ತದೆ. ಒಂದು ಪ್ರಚಾರವನ್ನು ಮಾತ್ರ ಎಲ್ಲರೂ ನೋಡುತ್ತಾರೆ. ಅದು ಅಭಿವೃದ್ಧಿ ಪ್ರಚಾರ, ಮತ್ತೊಂದು ಪ್ರಚಾರವೂ ಇದೆ ಅದು ಭೂಗತವಾದದ್ದು. ಅದೇ ವಿಷಕಾರಿಕ ಪ್ರಚಾರ. ಹೀಗಾಗಿ ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್ ಸರ್ಕಾರ ನಿಂತಿದ್ದು, ಬಿಜೆಪಿಯನ್ನು ಸೋಲುಸಿಯೇ ತೀರುತ್ತೇವೆಂದು ಹೇಳಿದ್ದಾರೆ.
ಬಿಜೆಪಿ ಏನನ್ನು ಮಾಡಲು ಪ್ರಯತ್ನ ನಡೆಸುತ್ತಿದೆ ಎಂಬುದು ಕಾಂಗ್ರೆಸ್'ಗೆ ಅರ್ಥವಾಗಿದೆ. ಹೀಗಾಗಿ ನಿತೀಶ್, ಲಾಲೂ ಹಾಗೂ ಕಾಂಗ್ರೆಸ್ ಪಕ್ಷ ಜೊತೆಗೂಡಿದೆ. ಇದರ ಪರಿಣಾಮವೇ ಬಿಹಾರ ಫಲಿತಾಂಶ. ಬಿಹಾರ ಫಲಿತಾಂಶ ನೋಡಿ ಅವರಿಗೆ ಆಶ್ಚರ್ಯವಾಗಿದೆ.
ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನರೇಗಾ ಯೋಜನೆಯನ್ನು ವ್ಯರ್ಥ ಯೋಜನೆ ಎಂದು ಹೇಳಿದ್ದಾರೆ. ಆದರೆ, ಇದೇ ನರೇಗಾ ಯೋಜನೆಯನ್ನು ಮುಂದುವರೆಸಿದರು. ನರೇಗಾ ಯೋಜನೆಯನ್ನು ಸ್ಥಗಿತಕೊಳಿಸಲು ನನಗೆ ಇಷ್ಟವಿರಲಿಲ್ಲ. ಇದಕ್ಕಾ ಕಾರಣ ಕಾಂಗ್ರೆಸ್ ಮಾಡಿದ ತಪ್ಪುಗಳು ಜನರ ಗಮನಕ್ಕೆ ಬರಲಿ ಎಂಬುದು. ಇದೀಗ ಅವರಿಗೆ ನರೇಗಾ ಯೋಜನೆಯ ಬಗ್ಗೆ ತಿಳುವಳಿಕೆ ಬಂದಿದೆ. ಇಂದು ಗ್ರಾಮೀಣ ಪ್ರದೇಶಯ ಬೆಳವಣಿಗೆಗೆ ನರೇಗಾ ಯೋಜನೆಯೇ ಕಾರಣ.
ಒಂದು ಕಡೆ ಮೋದಿಯವರು ನರೇಗಾ ಯೋಜನೆಯನ್ನು ವ್ಯರ್ಥ ಯೋಜನೆಯೆಂದು ಹೇಳುತ್ತಿದ್ದರೆ, ಮತ್ತೊಂದು ಕಡೆ ಹಣಕಾಸು ಸಚಿವರು ಹಾಗೂ ಇನ್ನಿತರೆ ಅಧಿಕಾರಿಗಳು ಉತ್ತಮ ಯೋಜನೆಯೆಂದು ಹೊಗಳುತ್ತಿದ್ದಾರೆ. ನಾಗಾ ಒಪ್ಪಂದವನ್ನು ಮಾಡಿ ಯಶಸ್ಸನ್ನು ಸಾಧಿಸಿದ್ದೇನೆಂದು ಪ್ರಧಾನಿಯವರು ಸೋನಿಯಾಗಾಂಧಿಯವರನ್ನು ಕರೆದು ಹೇಳಿದರು. ನಂತರ ಸೋನಿಯಾ ಗಾಂಧಿಯವರು ನನ್ನ ಬಳಿ ಒಪ್ಪಂದ ಕುರಿತಂತೆ ಮಾತುಕತೆ ಮಾತುಕತೆ ನಡೆಸಿದರು. ಅರುಣಾಚಲ ಪ್ರದೇಶ ಹಾಗೂ ಮಣಿಪುರದ ಮಧ್ಯೆ ಭೂ ಸಮಸ್ಯೆ ಇರುವುದು ನಮಗೆ ಗೊತ್ತಿದೆ. ಒಪ್ಪಂದಲ್ಲಿ ಗಂಭೀರ ಸಮಸ್ಯೆಗಳಿರುವುದು ಗೊತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒಪ್ಪಂದದಲ್ಲಿ ಏನು ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸೂಚಿಸಿದರು.
ಈ ವೇಳೆ ಅರುಣಾಚಲ ಪ್ರದೇಶ, ಮಣಿಪುರ ಹಾಗೂ ಅಸ್ಸಾಂನ ಎಲ್ಲಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಯಿತು. ಅವರೊಂದಿಗೆ ಮಾತುಕತೆ ನಡೆಸುವಾಗ ಒಪ್ಪಂದದ ಕುರಿತಂತೆ ಕೇಳಿದಾಗ. ಅವರಿಗೆ ಸರ್ಕಾರ ಯಾವುದರ ಬಗ್ಗೆ ಮಾತನಾಡುತ್ತಿದೆ ಎಂಬುದೇ ಗೊತ್ತಿಲ್ಲ ಎಂದರು. ನಂತರ ಇವರು ನಾಗಾಲ್ಯಾಂಡ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಈ ವೇಳೆ ನಾಗಾಲ್ಯಾಂಡ್ ಸಿಎಂ ಕೂಡ ಇದೇ ರೀತಿಯ ಉತ್ತರ ನೀಡಿದರು. ನಂತರ ಎಲ್ಲಾ ಮುಖ್ಯಮಂತ್ರಿಗಳೂ ಸೇರಿ ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಅವರಿಗೂ ಯಾವುದೇ ಮಾಹಿತಿ ಇರಲಿಲ್ಲ. ನಂತರ ನಾಗಾ ಒಪ್ಪಂದದಲ್ಲಿ ಯಾವ ಕೆಲಸವೂ ಆಗಿಲ್ಲ ಎಂಬುದು ನಮಗೆ ತಿಳಿಯಿತು. ದೇಶದಲ್ಲಿ ಏನಾಗುತ್ತಿದೆ ಎಂಬುದು ಪ್ರಧಾನಮಂತ್ರಿಯವರಿಗೇ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.