ನಾಪತ್ತೆಯಾಗಿದ್ದ ಸ್ನಾಪ್‌ಡೀಲ್ ಉದ್ಯೋಗಿ ದೀಪ್ತಿ ಪತ್ತೆ

ಬುಧವಾರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದೆಹಲಿಯಲ್ಲಿ ನಾಪತ್ತೆಯಾಗಿದ್ದ ಸ್ನಾಪ್‌ಡೀಲ್ ಉದ್ಯೋಗಿ ದೀಪ್ತಿ ಸರ್ನಾ ಪತ್ತೆಯಾಗಿದ್ದಾಳೆ...
ದೀಪ್ತಿ ಸರ್ನಾ (ಕೃಪೆ: ಟ್ವಿಟರ್ )
ದೀಪ್ತಿ ಸರ್ನಾ (ಕೃಪೆ: ಟ್ವಿಟರ್ )
ನವದೆಹಲಿ: ಬುಧವಾರ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದೆಹಲಿಯಲ್ಲಿ ನಾಪತ್ತೆಯಾಗಿದ್ದ ಸ್ನಾಪ್‌ಡೀಲ್ ಉದ್ಯೋಗಿ ದೀಪ್ತಿ ಸರ್ನಾ ಪತ್ತೆಯಾಗಿದ್ದಾಳೆ.
ಶುಕ್ರವಾರ ಬೆಳಗ್ಗೆ ಮನೆಯವರಿಗೆ ಫೋನ್ ಮಾಡಿದ್ದ ದೀಪ್ತಿ ತಾನು ಸುರಕ್ಷಿತವಾಗಿದ್ದೀನಿ ಹಾಗೂ ಹರ್ಯಾಣದ ಪಾನಿಪಟ್‌ನಿಂದ ದೆಹಲಿಗೆ ರೈಲಲ್ಲಿ ಬರುತ್ತಿದ್ದೀನಿ ಎಂದು ಹೇಳಿರುವುದಾಗಿ ಅವರ ಕುಟುಂಬದವರು ಹೇಳಿದ್ದಾರೆ.
ದೀಪ್ತಿ ಹರ್ಯಾಣದ ಕರ್ನಾಲ್ ಟೌನ್ ನಲ್ಲಿ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು ಬಂದಿದ್ದಾಳೆ ಎನ್ನಲಾಗುತ್ತಿದೆ.
ಬುಧವಾರ ಸಂಜೆ ಗಾಜಿಯಾಬಾದ್‌ನಿಂದ 24ರ ಹರೆಯದ ದೀಪ್ತಿ ನಾಪತ್ತೆಯಾಗಿದ್ದಳು.
ಗುರ್‌ಗಾಂವ್ ಕಚೇರಿಯಿಂದ ಗಾಜಿಯಾಬಾದ್‌ನಲ್ಲಿರುವ ಕಚೇರಿಗೆ ರಾತ್ರಿ 8 ಗಂಟೆಗೆ ದೀಪ್ತಿ ಆಟೋ ಮೂಲಕ ತೆರಳಿದ್ದಳು. ಆಟೋದಲ್ಲಿ ಕುಳಿತು ಆಕೆ ತನ್ನ ಮನೆಗೆ ಫೋನ್ ಮಾಡಿ ಎಂದಿನಂತೆ ತನ್ನನ್ನು ಪಿಕ್ ಮಾಡುವ ಜಾಗದಲ್ಲಿ ನಿಂತುಕೊಳ್ಳಿ ಎಂದು ಅಪ್ಪನಿಗೆ ಹೇಳಿದ್ದಳು.
ಇದಾದ ನಂತರ ಬೆಂಗಳೂರಿನಲ್ಲಿರುವ ಗೆಳತಿಯೊಬ್ಬಳಿಗೆ ಫೋನ್ ಮಾಡಿದ್ದಳು. ಆ ಗೆಳತಿ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ದೀಪ್ತಿ ಆಟೋದವನೊಂದಿಗೆ ಜಗಳವಾಡುತ್ತಿರುವ ದನಿ ಕೇಳಿತ್ತು. ಅದಾದನಂತರ  ಆಕೆಯ ಫೋನ್ ಸ್ವಿಚ್ ಆಫ್ ಆಯ್ತು.
ಆ ಗೆಳತಿ ಕೂಡಲೇ ದೀಪ್ತಿ ಮನೆಗೆ ಫೋನ್ ಮಾಡಿ ತಿಳಿಸಿದ್ದು, ಜಗಳ ಆಗಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಏನೂ ಇರಲಿಲ್ಲ ಎಂದು ದೀಪ್ತಿ ಅಪ್ಪ ನರೇಂದ್ರ ಸರ್ನಾ ಹೇಳಿದ್ದಾರೆ.
ನಾಪತ್ತೆಯಾಗಿರುವ ದೀಪ್ತಿಯನ್ನು ಪತ್ತೆ ಹಚ್ಚುವುದಕ್ಕಾಗಿ ಸ್ನಾಪ್‌ಡೀಲ್ ಗುರುವಾರ ಟ್ವಟರ್ ನಲ್ಲಿ  #HelpFindDipti  ಹ್ಯಾಶ್‌ಟ್ಯಾಗ್ ಆರಂಭಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com