ದೂರಿನ ಬಗ್ಗೆ ಪರಿಶೀಲನೆ ನಡೆಸಿದ ನಂತರ ಎಫ್ ಐಆರ್ ದಾಖಲಿಸಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಫೆ.9ರಂದು ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಡಿಎಸ್‌ಯು) ಕಾರ್ಯಕರ್ತರು ಉಮರ್ ಖಾಲೀದ್ ನೇತೃತ್ವದಲ್ಲಿಯೇ ಅಫ್ಜಲ್‌ಗುರು ಪರವಾದ ಹಾಗೂ ದೇಶ ವಿರೋಧಿ ಘೋಷಣೆಗಳನ್ನು ಹಾಕಿದ್ದರು ಎಂದು ದೆಹಲಿ ಪೊಲೀಸರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ತದ ನಂತರದಿಂದ ಉಮರ್ ಖಾಲೀದ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ.