ಪ್ರತಿ ಲೀಟರ್ ಪೆಟ್ರೋಲ್ ದರ 3.02 ರು. ಇಳಿಕೆ, ಡೀಸೆಲ್ 1.47 ರು. ಏರಿಕೆ

ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ. ಪ್ರತಿ ಲೀಟರ್ ಪೆಟ್ರೋಲ್ ದರ 3.02 ರುಪಾಯಿ ಇಳಿಕೆ ಮಾಡಿದೆ...
ಪೆಟ್ರೋಲ್-ಡೀಸೆಲ್
ಪೆಟ್ರೋಲ್-ಡೀಸೆಲ್

ನವದೆಹಲಿ: ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ. ಪ್ರತಿ ಲೀಟರ್ ಪೆಟ್ರೋಲ್ ದರ 3.02 ರುಪಾಯಿ ಇಳಿಕೆಯಾಗಿದೆ.

ಪೆಟ್ರೋಲ್ ದರ ಇಳಿಕೆಯಾಗಿದೆ ಆದರೆ ಡೀಸೆಲ್ ಪ್ರತಿ ಲೀಟರ್ ದರ 1.47 ರುಪಾಯಿ ಏರಿಕೆಯಾಗಿದ್ದು, ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

ಇಂದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಜೆಟ್ ಮಂಡನೆ ಮಾಡಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಿದ್ದು, ಸೇವಾ ತೆರಿಗೆ ಏರಿಕೆ ಮಾಡದಿರುವುದೇ ಪೆಟ್ರೋಲ್ ದರ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com