

ನವದೆಹಲಿ: ಹಿರಿಯ ಸಿಪಿಐ ನಾಯಕ ಬರ್ದಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರಿಯವರು ಶನಿವಾರ ಸಂತಾಪ ಸೂಚಿಸಿದ್ದಾರೆ.
ಟ್ವಿಟರ್ ಸಂತಾಪ ಸೂಚಿಸಿರುವ ಅವರು, ಎಬಿ.ಬರ್ದಾನ್ ಅವರನ್ನು ನಾವು ಎಂದಿಗೂ ನೆನಪಿಸಿಕೊಳ್ಳುತ್ತೇವೆ. ಬರ್ದಾನ್ ಅವರು ಭೋವೋದ್ರಿಕ್ತ ಕಮ್ಯುನಿಸ್ಟ್ ಆಗಿದ್ದಂತಹ ವ್ಯಕ್ತಿಯಾಗಿದ್ದರು. ಅಲ್ಲದೆ, ನಿಯಮ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿದ್ದ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಇದರಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದು, ಬರ್ದಾನ್ ಅವರ ಸಾವು ಸಿಪಿಐ ಪಕ್ಷಕ್ಕಷ್ಟೇ ನಷ್ಟವನ್ನುಂಟು ಮಾಡಿಲ್ಲ. ಇಡೀ ದೇಶಕ್ಕೂ ನಷ್ಟವಾಗಿದೆ ಎಂದು ಹೇಳಿದ್ದಾರೆ.