ಪಠಾಣ್‌ಕೋಟ್ ದಾಳಿಗೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಉಗ್ರರು ಉತ್ತಮ ತರಬೇತಿ ಪಡೆದವರಾಗಿದ್ದು, ಆತ್ಮಹತ್ಯೆ ದಳಕ್ಕೆ ಸೇರಿದ್ದಾರೆ. ಅವರಿಂದ ಭಾರೀ ಹಾನಿಯಾಗಬೇಕಿತ್ತು. ಆದರೆ ರಕ್ಷಣಾ ಪಡೆಗಳ ದೊಡ್ಡ ಪ್ರಮಾಣದ ಪ್ರಾಣ ಹಾನಿಯನ್ನು ತಪ್ಪಿಸಿ, ವಾಯುಪಡೆಯ ಪ್ರಮುಖ ಆಸ್ತಿ, ಪಾಸ್ತಿಯನ್ನು ರಕ್ಷಿಸಿದ್ದಾರೆ ಎಂದು ಪ್ರಶಂಸಿದರು.