ಕೊಲ್ಕೋತ್ತ ಹಿಟ್ ಅಂಡ್ ರನ್ ಪ್ರಕರಣ: ಮಾಜಿ ಶಾಸಕನ ಪುತ್ರನ ಬಂಧನ

ಐಎಎಫ್ ಅಧಿಕಾರಿಗೆ ಅಪಘಾತ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೋತ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ...
ಸಾಂಬಿಯಾ ಸೊಹ್ರಾಬ್
ಸಾಂಬಿಯಾ ಸೊಹ್ರಾಬ್
Updated on: 

ಕೊಲ್ಕೋತ: ಗಣರಾಜ್ಯೋತ್ಸವ ತಾಲೀಮಿನಲ್ಲಿ ನಿರತವಾಗಿದ್ದ ಐಎಎಫ್ ಅಧಿಕಾರಿಗೆ ಅಪಘಾತ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೋತ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಆರ್ ಜೆಡಿ ಮಾಜಿ ಶಾಸಕನ ಪುತ್ರ  ಸಾಂಬಿಯಾ ಸೊಹ್ರಾಬ್  ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲ್ಕೋತ್ತಾದ ಪಾರ್ಕ್ ಸರ್ಕಸ್- 7 ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 11.15ಕ್ಕೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಆರೋಪಿ ತಮ್ಮ ಸಂಬಂಧಿ ಮನೆಗೆ ತೆರಳುತ್ತಿದ್ದ ವೇಳೆ ಮೊಬೈಲ್ ಟವರ್ ಸಹಾಯದಿಂದ ಆತನನ್ನು ಬಂಧಿಸಲಾಯಿತು ಎಂದು ಅಪರಾಧ ವಿಭಾಗದ ಜಂಟಿ ಆಯುಕ್ತ ದೇಬಶಿಶ್ ಬೋರಲ್ ತಿಳಿಸಿದ್ದಾರೆ.

ಮಾಜಿ ಶಾಸಕ ಮೊಹಮದ್ ಸೊಹ್ರಾಬ್ ಪುತ್ರ ಸಾಂಬಿಯಾ ಸೊಹ್ರಾಬ್  ಜನವರಿ 13 ರಂದು ತನ್ನ ಆಡಿ ಕಾರನ್ನು ವೇಗವಾಗಿ ಚಲಾಯಿಸಿ ರಿಹರ್ಸಲ್ ನಲ್ಲಿ ನಿರತವಾಗಿದ್ದ ಅಭಿಮನ್ಯು ಎಂಬ ಅಧಿಕಾರಿಯ ಸಾವಿಗೆ ಕಾರಣವಾಗಿದ್ದ.

ಘಟನೆ ನಡೆದ ದಿನದಿಂದ ಮೊಹಮದ್ ಸೊಹ್ರಾಬ್, ಆತನ ಇಬ್ಬರು ಪುತ್ರರು ನಾಪತ್ತೆಯಾಗಿದ್ದರು. ಜೊತೆಗೆ ಬೇರೆ ರಾಜ್ಯಕ್ಕೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ಸುಮಾರು 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು, ಈ ಮೂವರ ವಿರುದ್ಧ ಪೊಲೀಸರು ಔಟ್ ಲುಕ್ ನೋಟೀಸ್ ಜಾರಿ ಮಾಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com