ದೇಶದ್ರೋಹ ಕೇಸ್: ಹಾರ್ದಿಕ್ ಪಟೇಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ದೇಶದ್ರೋಹದ ಆರೋಪ ಎದುರಿಸುತ್ತಿರುವ ಗುಜರಾತ್‌ನಲ್ಲಿ ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಹಾಗೂ...
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
ಅಹಮದಾಬಾದ್: ಗುಜರಾತ್‌ನಲ್ಲಿ ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿ, ದೇಶದ್ರೋಹದ ಆರೋಪ ಎದುರಿಸುತ್ತಿರುವ ಹಾರ್ದಿಕ್ ಪಟೇಲ್ ಹಾಗೂ ಆತನ ಮೂವರು ಬೆಂಬಲಿಗರ ವಿರುದ್ಧ ಅಪರಾಧ ವಿಭಾಗದ ಪೊಲೀಸರು ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಹಾರ್ದಿಕ್ ಪಟೇಲ್ ಹಾಗೂ ಬೆಂಬಲಿಗರಾದ ಕೇತನ್ ಪಟೇಲ್, ದಿನೇಶ್ ಬಂಭನಿಯಾ ವಿರುದ್ಧ ಸುಮಾರು 2,700 ಪುಟಗಳ ಚಾರ್ಜ್‌ಶೀಟ್ ಅನ್ನು ಪೊಲೀಸರು ಇಂದು ಮೆಟ್ರೋಪೊಲಿಟನ್ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಹಾರ್ದಿಕ್ ಪಟೇಲ್ ಅವರ ಇನ್ನು ಇಬ್ಬರು ಬೆಂಬಲಿಗರಾದ ಅಮ್ರಿಶ್ ಪಟೇಲ್ ಹಾಗೂ ಅಲ್ಪೇಶ್ ಕಠಿರಿಯಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ 'ಪರಾರಿಯಾಗಿದ್ದಾರೆ' ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಹತ್ಯೆಗೆ ಪ್ರಚೋದನೆ ಹಾಗೂ ಗುಜರಾತ್‌ ಸರ್ಕಾರದ ವಿರುದ್ಧ ವೇತನ ಸಮರಕ್ಕೆ ಕರೆ ನೀಡಿದ್ದ ಆರೋಪದ ಹಾರ್ದಿಕ್ ಪಟೇಲ್‌ ಹಾಗೂ ಆತನ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com