ದೆಹಲಿ ವಿಮಾನ ನಿಲ್ದಾಣದಲ್ಲಿ 3 ಶಂಕಿತ ಉಗ್ರರ ಬಂಧನ

ದೇಶಾದ್ಯಂತ ಶಂಕಿತ ಉಗ್ರರ ಬಂಧನ ಹೆಚ್ಚಾಗುತ್ತಿದ್ದು ಇದೀಗ ದೆಹಲಿ ವಿಮಾನ ನಿಲ್ದಾಣದಲ್ಲಿ 3 ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಬಂಧಿಸಿದೆ...
ಉಗ್ರರು
ಉಗ್ರರು

ನವದೆಹಲಿ: ದೇಶಾದ್ಯಂತ ಶಂಕಿತ ಉಗ್ರರ ಬಂಧನ ಹೆಚ್ಚಾಗುತ್ತಿದ್ದು ಇದೀಗ ದೆಹಲಿ ವಿಮಾನ ನಿಲ್ದಾಣದಲ್ಲಿ 3 ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಬಂಧಿಸಿದೆ.

ಈ ಮೂವರು ಶಂಕಿತ ಉಗ್ರರು ಅಬುಧಾಬಿಯಿಂದ ದೆಹಲಿಗೆ ಆಗಮಿಸಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಪರ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಶಂಕೆ ಮೇರೆಗೆ ಮೂವರನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ಐಎ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಬಂಧಿತ ಶಂಕಿತರನ್ನು ಶೇಖ್ ಅಜರ್ ಅಲ್ ಅಬ್ದುಲ್ ಶೇಖ್ , ಮೊಹಮ್ಮದ್ ಫರಾನ್ ರಫೀಕ್ ಶೇಖ್ ಮತ್ತು ಅದ್ನನ್ ಹುಸೇನ್ ಎಂದು ಗುರುತಿಸಲಾಗಿದೆ.

ಗಣರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ದೇಶಾದ್ಯಂತ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ 12 ಮಂದಿ ಶಂಕಿತ ಉಗ್ರರನ್ನು ಎನ್ಐಎ ಮಾರ್ಗದರ್ಶನದಲ್ಲಿ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com