ರೈಲ್ವೆ ಟ್ರ್ಯಾಕ್ ನಲ್ಲಿ ನಿಂತು ತನ್ನ ಸೆಲ್ ಫೋನ್ ನಿಂದ ಸೆಲ್ಫಿ ತೆಗೆದುಕೊಳ್ಳುತ್ತಿರಬೇಕಾದರೆ ಎಲೆಟ್ರಿಕ್ ಮಲ್ಟಿಪಲ್ ಯುನಿಟ್(ಇಎಂಯು)ರೈಲು ಆತನ ಮೇಲೆ ಹರಿದು ಹೋಗಿದೆ. ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ಸ್ನೇಹಿತರು ಮದ್ಯಾಪಾನ ಸೇವಿಸಿದ್ದರು, ಆದರೆ, ಮೃತಪಟ್ಟ ವಿದ್ಯಾರ್ಥಿ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ವೈದ್ಯಕೀಯ ವರದಿ ಬಂದ ಮೇಲೆ ತಿಳಿಯುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.