ಆಪ್ ಶಾಸಕ ನನ್ನ ಎದೆಗೆ ಹೊಡೆದ: ಮಹಿಳೆ ಆರೋಪ

ಪ್ರತಿಭಟನೆ ವೇಳೆ ಆಮ್ ಆದ್ಮಿ ಶಾಸಕ ಪ್ರಕಾಶ್ ಜರ್ವಲ್ ತನ್ನ ಎದೆಗೆ ಹೊಡೆದರು ಎಂದು ಮಹಿಳೆ ದೂರು ನೀಡಿದ್ದಾರೆ. ...
ಪ್ರಕಾಶ್ ಜರ್ವಲ್
ಪ್ರಕಾಶ್ ಜರ್ವಲ್

ನವದೆಹಲಿ: ಪ್ರತಿಭಟನೆ ವೇಳೆ ಆಮ್ ಆದ್ಮಿ ಶಾಸಕ ಪ್ರಕಾಶ್ ಜರ್ವಲ್ ತನ್ನ ಎದೆಗೆ ಹೊಡೆದರು ಎಂದು ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಲ್ ಅವರನ್ನು ಬಂಧಿಸಲಾಗಿದೆ.

ಈ ಸಂಬಂಧ ದೂರು ನೀಡಿರುವ ದೆಹಲಿಯ ಸಂಗಮ್ ವಿಹಾರ ಪ್ರದೇಶದ ಮಹಿಳೆ, ಜೂನ್ 2 ರಂದು ದೆಹಲಿಯ ಜಲ ಮಂಡಳಿ ಬಳಿ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಕೆಲ ಗೂಂಡಾಗಳ ಜೊತೆ ಬಂದ ಶಾಸಕ ಕೆಟ್ಟ ಉದ್ದೇಶದಿಂದ ನನ್ನ ಎದೆ ಮೇಲೆ ಹೊಡೆದರು. ನಾನು ನೋವಿನಿಂದ ಕೆಳಗೆ ಬೀಳುವವಳಿದ್ದೆ. ಹೇಗೋ ಸರಿದೂಗಿಸಿಕೊಂಡು ನಿಂತೆ, ನಂತರ ಅವರು ಅಲ್ಲಿಂದ ಹೊರಡುವ ಮುನ್ನ ನನಗೆ ಬೆದರಿಕೆ ಹಾಕಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕ ಪ್ರಕಾಶ್ ಜರ್ವಲ್ ನನ್ನ ವಿರುದ್ಧ ಮಾಡಿರುವ ಆರೋಪ ನಿರಾಧಾರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com