ಪ್ರಧಾನಿ ಮೋದಿ ಮೇಲೂ ಫ್ರಾನ್ಸ್ ಮಾದರಿ ಟ್ರಕ್ ದಾಳಿಗೆ ಸಂಚು: ದೆಹಲಿ ಪೊಲೀಸ್ ಹೈಅಲರ್ಟ್

ಫ್ರಾನ್ಸ್ ನ ನೀಸ್ ನಗರದಲ್ಲಿ ಉಗ್ರನೊಬ್ಬ ಟ್ರಕ್ ಹಾಯಿಸಿ 84 ಜನರ ಹತ್ಯೆ ಮಾಡಿದ ಮಾದರಿಯಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರ ಮೇಲೆ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಫ್ರಾನ್ಸ್ ನ ನೀಸ್ ನಗರದಲ್ಲಿ ಉಗ್ರನೊಬ್ಬ ಟ್ರಕ್ ಹಾಯಿಸಿ 84 ಜನರ ಹತ್ಯೆ ಮಾಡಿದ ಮಾದರಿಯಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರ ಮೇಲೆ ಭಾರೀ ವಾಹನಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಉಗ್ರ ಸಂಘಟನೆಗಳು ತೈಲ ಟ್ಯಾಂಕರ್, ಭಾರೀ ಟ್ರಕ್ ವಾಹನಗಳನ್ನು ಬಳಸಿ ಮೋದಿ ಸೇರಿ ಇತರ ಗಣ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆ ಮೋದಿ ಸಂಚರಿಸುವ ಮಾರ್ಗದಲ್ಲಿ ಅವರ ವಾಹನದ ಸುತ್ತಮುತ್ತ ದೊಡ್ಡ ವಾಹನಗಳು ಇರದಂತೆ ನೋಡಿಕೊಳ್ಳಲು ದೆಹಲಿ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಗುಪ್ತಚರ ಇಲಾಖೆ ಈ ಹಿಂದೆಯೇ ಇಂಥದ್ದೊಂದು ಎಚ್ಚರಿಕೆ ನೀಡಿತ್ತು. ಆದರೆ ಗುರುವಾರ ರಾತ್ರಿ ಫ್ರಾನ್ಸ್ ನಲ್ಲಿ ನಡೆದ ದಾಳಿ ಬಳಿಕ ಮತ್ತೊಮ್ಮೆ ಇಂಥ ಎಚ್ಚರಿಕೆ ನೀಡಿದ್ದು, ಮೋದಿ ಸಂಚರಿಸುವ ಮಾರ್ಗದಲ್ಲಿ ಭಾರೀ ವಾಹನಗಳು ಇರದಂತೆ ಕಟ್ಟೆಚ್ಚರ ವಹಿಸುಬೇಕು ಎಂದು ಸೂಚಿಸಿದೆ.

ಉಗ್ರರ ಹಿಟ್ ಲಿಸ್ಟ್ ನಲ್ಲಿ ಮೋದಿ ಅವರ ಹೆಸರು ಇರುವುದರಿಂದ ಅವರು ಸಂಚರಿಸುವ ಮಾರ್ಗದಲ್ಲಿ ತೈಲ ಟ್ಯಾಂಕರ್, ಲಾರಿ ಸಹಿತ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಹಿಂದೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ 15 ನಿಮಿಷ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ ಈ ಅವಧಿಯನ್ನು 10 ನಿಮಿಷಕ್ಕೆ ಇಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com