ಕಾಶ್ಮೀರ ಗಲಭೆ: ಸತತ 10 ನೇ ದಿನವೂ ಮುಂದುವರೆದ ಕರ್ಫ್ಯೂ

ಉಗ್ರ ವಾನಿ ಹತ್ಯೆಯನ್ನು ಖಂಡಿಸಿ ಉಂಟಾಗಿರುವ ಗಲಭೆ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಸತತ 10 ನೇ ದಿನವೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಗಲಭೆ: ಸತತ 10 ನೇ ದಿನವೂ ಮುಂದುವರೆದ ಕರ್ಫ್ಯೂ
ಕಾಶ್ಮೀರ ಗಲಭೆ: ಸತತ 10 ನೇ ದಿನವೂ ಮುಂದುವರೆದ ಕರ್ಫ್ಯೂ
Updated on: 

ಶ್ರೀನಗರ: ಉಗ್ರ ವಾನಿ ಹತ್ಯೆಯನ್ನು ಖಂಡಿಸಿ ಉಂಟಾಗಿರುವ ಗಲಭೆ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಸತತ 10 ನೇ ದಿನವೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಣಿವೆಯ ಎಲ್ಲಾ 10 ಜಿಲ್ಲೆಗಳಲ್ಲೂ ಕರ್ಫ್ಯೂ ಮುಂದುವರೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಪಡೆಯುವ ಅಗತ್ಯವಿರುವ ರೋಗಿಗಳಿಗೆ ಆಸ್ಪತ್ರೆಗೆ ಸಂಚರಿಸಲು ಅನುವು ಮಾಡಿಕೊಡಲು ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ವಿಮಾನ ಪ್ರಯಾಣಿಕರ ಟಿಕೆಟ್ ಗಳನ್ನು ಕರ್ಫ್ಯೂ ಪಾಸ್ ಎಂದು ಪರಿಗಣಿಸಲಾಗುತ್ತಿರುವುದರಿಂದ ಅವರಿಗೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 10 ದಿನಗಳಲ್ಲಿ ಗಲಭೆ ಪೀಡಿತ ಕಾಶ್ಮೀರದಲ್ಲಿ ಮೃತಪಟ್ಟವರ ಸಂಖ್ಯೆ 41 ಕ್ಕೆ ಏರಿಕೆಯಾಗಿದ್ದು ಶನಿವಾರವೂ ಪೊಲೀಸರ ಗುಂಡೇಟಿಗೆ ಓರ್ವ ಯುವಕ ಬಲಿಯಾಗಿದ್ದಾನೆ.

ಇನ್ನು ಸತತ ಮೂರನೇ ದಿನವೂ ಸಹ ಕಾಶ್ಮೀರದಲ್ಲಿ ಪ್ರಾದೇಶಿಕ ಹಾಗೂ ಆಂಗ್ಲ ಭಾಷೆಗಳ ಪತ್ರಿಕೆ ಮುದ್ರಣಕ್ಕೆ ನಿಷೇಧ ಮುಂದುವರೆದಿದ್ದು, ಜು.19 ರ ವರೆಗೆ ಪತ್ರಿಕೆಗಳು ಮುದ್ರಣಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದಿಂದ ಮೊಬೈಲ್ ಮತ್ತು ಇಂಟರ್​ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಕೇಬಲ್ ಟಿವಿ ಪ್ರಸಾರವನ್ನೂ ಸಹ ನಿಷೇಧಿಸಲಾಗಿತ್ತು. ಆದರೆ ಶನಿವಾರದಿಂದ ಕೇಬಲ್ ಟಿವಿ ಪ್ರಸಾರ ಪುನಾರಂಭಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com