ಮದರ್ ಥೆರೇಸಾಗೆ ಸಂತ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಜ್ರಿವಾಲ್, ಮಮತಾ

ರೋಮ್ ನಲ್ಲಿ ನಡೆಯಲಿರುವ ಮದರ್ ಥೆರೇಸಾಗೆ ಸಂತ ಪದವಿ ನೀಡಲಿರುವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಮದರ್ ಥೆರೇಸಾ
ಮದರ್ ಥೆರೇಸಾ

ಕೋಲ್ಕತಾ: ರೋಮ್ ನಲ್ಲಿ ನಡೆಯಲಿರುವ ಮದರ್ ಥೆರೇಸಾಗೆ ಸಂತ ಪದವಿ ನೀಡಲಿರುವ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ  ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.

ಸೆ.4 ರಂದು ಮದರ್ ಥೆರೇಸಾ ಅವರಿಗೆ ಸಂತ ಪದವಿ ನೀಡಲಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಸ್ಟರ್  ಪ್ರೇಮಾ ಅವರು ನೀಡಿರುವ ಆಹ್ವಾನವನ್ನು ದೆಹಲಿ ಸಿಎಂ ಒಪ್ಪಿಕೊಂಡಿವುದಾಗಿ ಆಪ್ ನಾಯಕ ಅಶುತೋಷ್ ಟ್ವೀಟ್ ಮಾಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮಮತಾ ಬ್ಯಾನರ್ಜಿ ಈ ಹಿಂದೆ ಟ್ವಿಟರ್ ಮಾಡಿದ್ದರು. ಮದರ್ ತೆರೆಸಾ ಅವರನ್ನು ಸಂತರೆಂದು ಪರಿಗಣಿಸಲಾಗುವುದು ಎಂದು ವ್ಯಾಟಿಕನ್ ನ ಆಯೋಗವೊಂದು 2016 ರ ಮಾರ್ಚ್ ನಲ್ಲಿ ಹೇಳಿತ್ತು.

ಮದರ್ ತೆರೆಸಾ ಅವರು ನಿಧನಹೊಂದಿ ಸುಮಾರು ಎರಡು ದಶಕಗಳ ನಂತರ ಹಿರಿಯ ಪಾದ್ರಿಗಳ ಸಮಿತಿ ಅವರಿಗೆ ಅತ್ಯುನ್ನತ ಗೌರವ ನೀಡಿದ್ದು, ಸೆ.4 ರನೆಂದು ಸಂತ ಪದವಿಯನ್ನು ನೀಡಲಾಗುತ್ತಿದೆ. ಸಿಸ್ಟರ್ ಪ್ರೇಮಾ ಹಾಗೂ ಆರ್ಚ್ ಬಿಷಪ್ ಡಿ ಸೌಜಾ ಅವರೊಂದಿಗೆ ಮಮತಾ ಬ್ಯಾನರ್ಜಿ ರೋಮ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com