ಬೆಲೆ ಏರಿಕೆ ಬಗ್ಗೆ ಮೌನವೇಕೆ?: ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು, ಈ ಪ್ರಧಾನಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಬೆಲೆ ಏರಿಕೆ ವಿಷಯ ಪ್ರಸ್ತಾಪಿಸಿದ ರಾಹುಲ್, ‘ಮೋದೀಜಿ, ಜನರ ಚೌಕೀದಾರನಾಗುತ್ತೇನೆ ಅಂದಿದ್ದಿರಲ್ಲ, ನಿಮ್ಮ ಈ ಭರವಸೆ ಏನಾಯಿತು? ಎನ್​ಡಿಎ ಸರ್ಕಾರದ 2ನೇ ವರ್ಷಾಚರಣೆಯಲ್ಲಿ ಏರುತ್ತಿರುವ ಬೆಲೆಗಳ ಬಗ್ಗೆ ಏಕೆ ಮೌನವಾಗಿದ್ದೀರಿ?’ಎಂದು ಪ್ರಶ್ನಿಸಿದರು.
ಹಣದುಬ್ಬರ, ತರಕಾರಿಗಳು ಹಾಗೂ ಆಹಾರ ಧಾನ್ಯ, ಬೇಳೆಕಾಳುಗಳ ಬೆಲೆ ದಿನೆದಿನೇ ಏರುತ್ತಿದೆ. ಕಳೆದ ವರ್ಷ ದ್ವಿದಳ ಧಾನ್ಯಗಳ ಬೆಲೆ ಪ್ರತಿ ತಿಂಗಳೂ ಶೇಕಡಾ 20ರಷ್ಟು ಹೆಚ್ಚಿದೆ. ಜನಸಾಮಾನ್ಯರನ್ನು ಬಾಧಿಸುತ್ತಿರುವ ಬೆಲೆ ಏರಿಕೆ ಬಗ್ಗೆ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದು ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೆಲೆ ಏರಿಕೆ, ಅಗತ್ಯ ವಸ್ತುಗಳ ಅಭಾವಕ್ಕೆ ಭ್ರಷ್ಟಾಚಾರವೇ ಮೂಲ ಕಾರಣ ಎಂದ ರಾಹುಲ್ ಗಾಂಧಿ, ‘ಜನರ ಹಿತಕಾಯುವ ಚೌಕೀದಾರನಾಗಬಯಸಿದ್ದೇನೆ ಎಂದು ನೀವು ಹೇಳಿದ್ದಿರಿ. ಈಗ ಬಡವರ ಹಿತರಕ್ಷಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿದರು,
ಕೈಗಾರಿಕೆಗಳಿಗಾಗಿ ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಜಾರಿ ಮೂಲಕ ರೈತರ ನೆಲವನ್ನು ಕಿತ್ತುಕೊಳ್ಳಲು ಹೊರಟಿದ್ದರಿ. ಆದರೆ ವ್ಯಾಪಕ ರಾಜಕೀಯ ವಿರೋಧದ ಬಳಿಕ ಅದನ್ನು ಕೈಬಿಟ್ಟಿರಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com