ವಿಧಾನಸಭೆ ವಿನ್ಯಾಸ ನೋಡಿ ಅಣುಸ್ಥಾವರ ಎಂದು ತಲೆ ಕೆಡಿಸಿಕೊಂಡ ಪಾಕ್ ಮಾಧ್ಯಮಗಳು

ಆಂಧ್ರ ವಿಧಾನ ಸಭೆ ಕಟ್ಟಡಕ್ಕೆ ಗೋಲಾಕಾರದ ವಿನ್ಯಾಸ ಮಾಡಿರುವುದನ್ನು ನೋಡಿದ ಪಾಕ್ ಮಾಧ್ಯಮಗಳು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರ ತನ್ನ ಹೊಸ ರಾಜಧಾನಿಗೆ ಅಮರಾವತಿ ಎಂದು ಹೆಸರಿಟ್ಟು ಪಾಶ್ಚಿಮಾತ್ಯ ದೇಶಗಳನ್ನು ಆಕರ್ಷಿಸಲು ಮುಂದಾಗಿದೆ. ಆಂಧ್ರ ವಿಧಾನ ಸಭೆ ಕಟ್ಟಡಕ್ಕೆ ಗೋಲಾಕಾರದ ವಿನ್ಯಾಸ ಮಾಡಿರುವುದನ್ನು ನೋಡಿದ ಪಾಕ್ ಮಾಧ್ಯಮಗಳು ವಿಜಯವಾಡ ಬಳಿ ಬೃಹತ್ ಅಣುಸ್ಥಾವರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ ಎಂದು ಬಿತ್ತರಿಸಿವೆ.

ಪಾಕಿಸ್ತಾನದ ಖಾಸಗಿ ವಾಹಿನಿಯೊಂದು ಈ ಬಗ್ಗೆ ಚರ್ಚೆ ಏರ್ಪಡಿಸಿ ವಿಡಿಯೋ ತುಣುಕುಗಳನ್ನೊಳಗೊಂಡ ಕಾರ್ಯಕ್ರಮ ನಡೆಸಿದ್ದನ್ನು ತೆಲುಗು ಚಾನೆಲ್ ಪ್ರಸಾರ ಮಾಡಿದೆ.

ಆಂಧ್ರ ಪ್ರದೇಶದಲ್ಲಿ ಹೊಸ ಬೃಹತ್ ನಗರವನ್ನು ನಿರ್ಮಿಸಲು ಉದ್ದೇಶಿಸಿದ್ದು,  ಹೈಡ್ರೋಜನ್ ಬಾಂಬ್ ತಯಾರಿಸಲು ಮೂಲ ಸೌಕರ್ಯ ಸೃಷ್ಟಿಸುವ ಪ್ರಯತ್ನ ಎಂದು ವರದಿ ಮಾಡಿತ್ತು.

ಆಂಧ್ರ ಪ್ರದೇಶ ರಾಜಧಾನಿ ಅಮರಾವತಿಗೆ ಜಪಾನ್ ಚೀನಾ, ಸಿಂಗಾಪುರ ದೇಶಗಳ ನಿಯೋಗ ಭೇಟಿ ನೀಡುತ್ತಿರುವುದು ಪಾಕ್ ಮಾಧ್ಯಮಗಳು ನಿದ್ದೆಗೆಡುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com