ಬಿಹಾರ ಟಾಪರ್ ಗಳ ಪ್ರಕರಣ: ಬಿಎಸ್ಇಬಿ ಮಾಜಿ ಅಧ್ಯಕ್ಷರ ವಿರುದ್ಧ ಬಂಧನ ವಾರಂಟ್

12ನೇ ತರಗತಿಯ ವಿಜ್ಞಾನ ಮತ್ತು ಕಲಾ ವಿಭಾಗದ ಟಾಪರ್ ಗಳ ಫಲಿತಾಂಶದಲ್ಲಿನ ಅಕ್ರಮ ಪ್ರಕರಣ ಸಂಬಂಧ ಬಿಹಾರ ಶಾಲಾ ಪರೀಕ್ಷಾ...
ಲಾಲ್ಕೇಶ್ವರ್ ಪ್ರಸಾದ್ ಸಿಂಗ್
ಲಾಲ್ಕೇಶ್ವರ್ ಪ್ರಸಾದ್ ಸಿಂಗ್
Updated on: 
ಪಟನಾ: 12ನೇ ತರಗತಿಯ ವಿಜ್ಞಾನ ಮತ್ತು ಕಲಾ ವಿಭಾಗದ ಟಾಪರ್ ಗಳ ಫಲಿತಾಂಶದಲ್ಲಿನ ಅಕ್ರಮ ಪ್ರಕರಣ ಸಂಬಂಧ ಬಿಹಾರ ಶಾಲಾ ಪರೀಕ್ಷಾ ಮಂಡಳಿ(ಬಿಎಸ್ಇಬಿ)ಯ ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ.
ಪ್ರಕರಣದಲ್ಲಿ ಲಾಲ್ಕೇಶ್ವರ್ ಪ್ರಸಾದ್ ಸಿಂಗ್ ಪ್ರಮುಖ ಆರೋಪಿ ಆಗಿದ್ದರು. ಕಳೆದ ವಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂಗತರಾಗಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಪಟನಾ ಸಿವಿಲ್ ನ್ಯಾಯಾಲಯ ಲಾಲ್ಕೇಶ್ವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಈಗಾಗಲೇ ಸಿಂಗ್ ಅವರ ಆಪ್ತ ಕಾರ್ಯದರ್ಶಿಯನ್ನು ಬಂಧಿಸಿದ್ದು, ಲಾಲ್ಕೇಶ್ವರ್ ಅವರನ್ನು ಬಿಹಾರದ ಹೊರವಲಯದಲ್ಲಿ ಬುಧವಾರ ಬಂಧಿಸಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಸಿಂಗ್ ಅವರ ಪತ್ನಿ ಉಷಾ ಸಿನ್ಹಾ ಅವರ ಕೈವಾಡವಿದೆ ಎಂದೂ ಶಂಕಿಸಲಾಗಿದೆ. 
ಜನತಾದಳ ಒಕ್ಕೂಟದ ಮಾಜಿ ಶಾಸಕಿ ಆಗಿರುವ ಉಷಾ ಇದೀಗ ಕಣ್ಮರೆ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ಸಬ್ಜೆಕ್ಟ್ ಎಂದ ಬೆನ್ನಲ್ಲೇ ಪಿಯು ಪರೀಕ್ಷಾ ಮಂಡಳಿ 14 ಟಾಪರ್​ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಎಂಬುವರು ಅನುತ್ತೀರ್ಣರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com