ದ ಕಂಜ್ಯೂರಿಂಗ್ 2 ಹಾರರ್ ಸಿನಿಮಾ ನೋಡುತ್ತಿದ್ದ ವ್ಯಕ್ತಿ ಚಿತ್ರಮಂದಿರದಲ್ಲೇ ಸಾವು

ಇತ್ತೀಚೆಗೆ ಬಿಡುಗಡೆಯಾದ ‘ದ ಕಂಜ್ಯೂರಿಂಗ್ 2’ ಹಾರರ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುತ್ತಿದ್ದ ವೇಳೆ 65 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಇತ್ತೀಚೆಗೆ ಬಿಡುಗಡೆಯಾದ ‘ದ ಕಂಜ್ಯೂರಿಂಗ್ 2’ ಹಾರರ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುತ್ತಿದ್ದ ವೇಳೆ 65 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಿರುವಣ್ಣಾಮಲೈನಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳು ಬಾಲಸುಬ್ರಮಣಿಯನ್ ಸಿನಿಮಾಸ್ ಥಿಯೇಟರ್​ನಲ್ಲಿ ಇಂಗ್ಲಿಷ್ ಸಿನಿಮಾ ‘ದ ಕಂಜ್ಯೂರಿಂಗ್ 2’ ನೋಡಲು ತೆರಳಿದ್ದರು. ಚಿತ್ರದ ಅಂತ್ಯದಲ್ಲಿ ಕಾಣಿಸಿಕೊಂಡ ಭಯಾನಕ ದೃಶ್ಯಕ್ಕೆ ಬೆದರಿದ ವ್ಯಕ್ತಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

ಎದೆನೋವಿನಿಂದ ಕುಸಿದುಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಗೆ ಕರೆ ಮಾಡಲಾಯಿತು, ಆಂಬುಲೆನ್ಸ್ ಬರುವ ವೇಳೆಗೆ ಆತ ಮೃತಪಟ್ಟಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com