ಕಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ರೂಬಿ ರಾಯ್ ರಾಜಕೀಯ ಶಾಸ್ತ್ರ ಅಡುಗೆ ಸಬ್ಜೆಕ್ಟ್ ಎಂದ ಬೆನ್ನಲ್ಲೇ ಪಿಯು ಪರೀಕ್ಷಾ ಮಂಡಳಿ 14 ಟಾಪರ್ಗಳಿಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಸೌರಭ್ ಶ್ರೇಷ್ಠ, ರಾಹುಲ್ ಕುಮಾರ್, ರೂಬಿ ರಾಯ್ ಹಾಗೂ ಶಾಲಿನಿ ಎಂಬುವರು ಅನುತ್ತೀರ್ಣರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.