ಸಲ್ಮಾನ್ ಅತ್ಯಾಚಾರ ಹೇಳಿಕೆ: ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹ

ಅತ್ಯಾಚಾರದ ಕುರಿತಂತೆ ಹೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ ಅವರು ಕೂಡಲೇ ಕ್ಷಮೆಯಾಚಿಸುವಂತೆ ಭಾರತೀಯ ಜನತಾ ಪಕ್ಷ ಮಂಗಳವಾರ ಆಗ್ರಹಿಸಿದೆ..
ಬಿಜೆಪಿ ವಕ್ತಾರೆ ಶೈನಾ ಎನ್.ಸಿ
ಬಿಜೆಪಿ ವಕ್ತಾರೆ ಶೈನಾ ಎನ್.ಸಿ
Updated on: 

ನವದೆಹಲಿ: ಅತ್ಯಾಚಾರದ ಕುರಿತಂತೆ ಹೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ ಅವರು ಕೂಡಲೇ ಕ್ಷಮೆಯಾಚಿಸುವಂತೆ ಭಾರತೀಯ ಜನತಾ ಪಕ್ಷ ಮಂಗಳವಾರ ಆಗ್ರಹಿಸಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರೆ ಶೈನಾ ಎನ್.ಸಿ ಅವರು, ಅತ್ಯಾಚಾರ ಎಂಬುದು ಮಹಿಳೆಯರ ಆತ್ಮಗೌರವಕ್ಕೆ ಸಂಬಂಧಿಸಿದ್ದು, ಸಲ್ಮಾನ್ ಖಾನ್ ಅವರು ತಮ್ಮ ಸ್ಥಿತಿಯನ್ನು ಈ ರೀತಿಯಾಗಿ ಹೋಲಿಕೆ ಮಾಡಿರುವುದು ಸರಿಲ್ಲ. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕೂಡಲೇ ಸಲ್ಮಾನ್ ಖಾನ್ ಅವರು ತಮ್ಮ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರು ಓರ್ವ ನಟನಾಗಿ ಹಾಗೂ ಮಹಿಳೆಯರಿಗೆ ಗೌರವ ನೀಡುವ ವ್ಯಕ್ತಿಯಾಗಿ ಈ ರೀತಿಯಾಗಿ ಹೇಳಿಕೆಯನ್ನು ನೀಡಬಾರದು. ಬೆಂಬಲಿಗರು ಅಥವಾ ಅಭಿಮಾನಿಗಳೆಂಬ ಪ್ರಶ್ನೆ ಇಲ್ಲಿ ಏಳುವುದಿಲ್ಲ. ಪ್ರಶ್ನೆಯಿರುವುದು ಮಹಿಳೆಯ ಗೌರವದ ಬಗ್ಗೆ. 21ನೇ ಶತಮಾನದಲ್ಲಿದ್ದೇವೆಂಬ ಮಾತ್ರಕ್ಕೆ ಇಂತಹ ಹೇಳಿಕೆಯನ್ನು ಸಹಿಸಲು ಅಸಾಧ್ಯ. ಅತ್ಯಾಚಾರ ಎಂಬುದು ಮಹಿಳೆಯ ದೈಹಿಕಕ್ಕೆ ಸಂಬಂಧಿಸಿದ್ದು, ಈ ರೀತಿಯ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್ ಅವರು ಸುಲ್ತಾನ್ ಚಿತ್ರದ ಕುರಿತಂತೆ ಮಾತನಾಡಿದ್ದರು. ಚಿತ್ರೀಕರಣದಲ್ಲಿ ತಮ್ಮ ಪರಿಶ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ಅವರು, ಕುಸ್ತು ಪಟುವಾಗಿ ನಟಿಸಿದ್ದ ಸಮಯದಲ್ಲಿ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಕೆ ಮಾಡಿಕೊಂಡಿದ್ದರು.

ಕುಸ್ತಿ ಶೂಟ್ ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತೆಂದರೆ ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ಸ್ಥಿತಿಯಷ್ಟು ದುರ್ಬಲವಾಗಿತ್ತು. ಶೋಚನೀಯವಾಗಿತ್ತು. ರಿಂಗ್ ನಿಂದ ನನಗೆ ಹೊರಗೆ ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗದಷ್ಟು ನೋವು, ದೌರ್ಬಲ್ಯ ನನ್ನನ್ನು ಕಾಡುತ್ತಿತ್ತು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com